ವಿಶ್ವಕಪ್ 2023ರ ಮೊದಲ ಸೆಮಿಫೈನಲ್‌‌ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ತಂಡದ ನಾಯಕ ರೋಹಿತ್‌ ಶರ್ಮಾ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಮೊದಲು ಕಣಕ್ಕಿಳಿದ ರೋಹಿತ್‌ ಮತ್ತು ಶುಭ್‌ಮನ್ ಗಿಲ್‌ ಉತ್ತಮ ಇನ್ನಿಂಗ್ಸ್‌ ಆರಂಭಿಸಿದರು. ಶುಭ್‌ಮನ್ ಗಿಲ್‌ ಆಕರ್ಷಕ ಅರ್ಧಶತಕ ಸಿಡಿಸಿ ಆಟವಾಡುತ್ತಿದ್ದ ವೇಳೆ ಇಂಜುರಿಗೆ ಒಳಗಾಗಿದ್ದಾರೆ.

ಶುಭ್‌ಮನ್ ಗಿಲ್‌ 65 ಎಸೆತದಲ್ಲಿ 3 ಸಿಕ್ಸ್‌ ಮತ್ತು 8 ಫೋರ್‌ ಮೂಲಕ 79 ರನ್‌ ಗಳಿಸಿದ್ದ ವೇಳೆ ಗಿಲ್‌ ಇಂಜುರಿಗೆ ಒಳಗಾದರು. ಹೀಗಾಗಿ ಗಿಲ್‌‌ ರಿಟೈರ್ಡ್ ಹರ್ಟ್‌‌ ಆಗಿ ಪೆವಿಲಿಯನ್‌ಗೆ ತೆರಳಿದ್ದಾರೆ. ಗಿಲ್ ಸೆಳೆತದಿಂದ ಮೈದಾನದಲ್ಲಿಯೇ ಬ್ಯಾಟ್‌‌ ಬಿಟ್ಟು ಕುಳಿತರು. ಫಿಸಿಯೋ ಧಾವಿಸಿ ಗಿಲ್‌ ಅವರನ್ನು ಪರೀಕ್ಷಿಸಿದ ಬಳಿಕ ಗಿಲ್ ನಿವೃತ್ತಿಯಾಗಬೇಕಾಯಿತು. ಅವರ ಬದಲಿಗೆ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಡೋಕೆ ಬಂದಿದ್ದಾರೆ.ಶುಭ್‌ಮನ್ ಗಿಲ್‌ ರಿಟೈರ್ಡ್ ಹರ್ಟ್‌ ಆಗಿ ವಾಪಸ್ಸಾಗಿದ್ದಾರೆ. ಆದರೆ ಅವರು ಗುಣಮುಖರಾದ ತಕ್ಷಣ ಯಾವುದೇ ವಿಕೆಟ್‌‌ ಬಿದ್ದಲ್ಲಿ ನಂತರ ಮತ್ತೆ ಗಿಲ್‌ ಆಟವಾಡುವ ಅವಕಾಶವನ್ನು ಹೊಂದಿದ್ದಾರೆ.ರಿಟೈರ್ಡ್ ಹರ್ಟ್ ಮತ್ತು ರಿಟೈರ್ಡ್‌ ಔಟ್ ನಡುವಿನ ವ್ಯತ್ಯಾಸವೇನು ಎಂದು ಜನ ಹುಡಕಲಾರಂಭಿಸಿದ್ದಾರೆ. ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದಾದರೆ, ರಿಟೈರ್ಡ್ ಔಟ್ ಪರಿಕಲ್ಪನೆಯು ಹೊಸ ವಿದ್ಯಮಾನವಲ್ಲ, ಆದಾಗ್ಯೂ, ನಾನ್-ಸ್ಟ್ರೈಕರ್‌ನ ಕೊನೆಯಲ್ಲಿ ರನ್-ಔಟ್‌ಗಳಂತೆಯೇ, ಇದು ಅನೇಕ ತಂಡಗಳು ಪ್ರಯತ್ನಿಸದ ಸಂಗತಿಯಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಬ್ಯಾಟಿಂಗ್ ಮಾಡುತ್ತಿರುವವನಿಗಿಂತ ಮುಂದಿನ ಆಟಗಾರ ಉತ್ತಮವಾಗಿ ಆಡುತ್ತಾನೆ ಎಂಬ ನಂಬಿಕೆ ಇದ್ದಲ್ಲಿ, ಸ್ವತಃ ಸ್ಟ್ರೈಕ್ ನಲ್ಲಿ ಇರುವ ಆಟಗಾರ ರಿಟೈಡ್ ಔಟ್ ಆಗಬಹುದು. ಆದರೆ ಇದರಲ್ಲಿ ಒಮ್ಮೆ ನಿವೃತ್ತಿ ತೆಗೆದುಕೊಂಡಲ್ಲಿ ಮತ್ತೆ ಆ ಪಂದ್ಯದಲ್ಲಿ ಆ ಆಟಗಾರ ಬ್ಯಾಟಿಂಗ್ ಮಾಡುವಂತಿಲ್ಲ. ಆದರೆ ರಿಟೈರ್ಡ್ ಹರ್ಟ್ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಕ್ರಿಕೆಟ್ ನಿಯಮಗಳ ಪ್ರಕಾರ, ಬ್ಯಾಟ್ಸ್‌ಮನ್ ಅನಾರೋಗ್ಯ, ಗಾಯ ಅಥವಾ ಇತರ ಯಾವುದೇ ಅನಿವಾರ್ಯ ಕಾರಣದಿಂದ ಮುಂದುವರಿಯಲು ಸಾಧ್ಯವಾಗದಿದ್ದರೆ ಆಟದಿಂದ ಆ ಕ್ಷಣಕ್ಕೆ ನಿವೃತ್ತಿ ಪಡೆದುಕೊಳ್ಳಬಹುದು. ಆದರೆ ರಿಟೈರ್ಡ್ ಹರ್ಟ್ ಆದಲ್ಲಿ ಆಟಗಾರ ಮತ್ತೆ ಆರಾಮವಾದಲ್ಲಿ ಪಂದ್ಯದಲ್ಲಿ ಸೇರಕೊಳ್ಳಬಹುದು. ಹಾಗೂ ಆತ ಬ್ಯಾಟಿಂಗ್ ಸಹ ಮಾಡಬಹುದಾಗಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ