ಪೈಚಾರ್: ಸುಳ್ಯದಲ್ಲಿ ಸಂಜೆ ಸಮಯ ಸುರಿದ ಧಾರಕಾರ ಮಳೆಯಿಂದ ಹಲವೆಡೆ ಮರಗಳು ನೆಲಕ್ಕೆ ಉರುಳಿವೆ,
ಅರಂತೋಡು ಶಾಲಾ ಬಳಿ ಅಂಗಡಿ ಮಜಲು ರಸ್ತೆಗೆ ತೆಂಗಿನ ಮರವೊಂದು ಮುರಿದು ಬಿದ್ದು ಸ್ವಲ್ಪ ಹೊತ್ತು ಸಂಚಾರಕ್ಕೆ ಅಡ್ಡಿ ಯಾಯಿತು. ಇದನ್ನು ಗಮನಿಸಿದ ಸ್ಥಳೀಯ ಯುವಕರಾದ ಆಶಿಕ್ ಅರಂತೋಡು, ಕೃಷ್ಣ ದಾಸರ ಹಿತ್ಲು,ಹಮೀದ್ ಕುಕ್ಕಂಬಳ,ಮುನೀರ್ ಸಂಟ್ಯಾರ್,ತಾಜುದ್ದೀನ್ ಕೂಡಲೇ ತೆಂಗಿನ ಮರವನ್ನು ರಸ್ತೆಯಿಂದ ತೆರವು ಗೊಳಿಸಿ ರಸ್ತೆ ಸಂಚಾರಕ್ಕೆ ಸುಗಮಗೊಳಿಸಿದ್ದಾರೆ. ಹಾಗೇ ಪೈಚಾರಿನಲ್ಲಿ ವಿದ್ಯುತ್ ತಂತಿ ಮೇಲೆ ತೆಂಗಿನ ಮರ ಬಿದ್ದಿವೆ.