www.nammasullia.in: ಸುಳ್ಯದಲ್ಲಿ ಎರಡನೇ ದಿನವಾದ ಇಂದು ಕೂಡ ಭರ್ಜರಿ ಮಳೆಯಾಗಿದೆ. ನಿನ್ನೆ ಸುರಿದ ಮಳೆಯಿಂದಾಗಿ ಅನೇಕ ಕಡೆ ಅವಾಂತರ ಸಂಭವಿಸಿದ್ದು ವಿದ್ಯುತ್ ಕಡಿತವಾಗಿತ್ತು. ಇಂದು ಕೂಡಾ ಗಾಳಿ, ಗುಡುಗು ಸಹಿತ ವರುಣನ ಆರ್ಭಟ ಜೋರಾಗಿದೆ. ನಿನ್ನೆ ಮಳೆಯಿಂದಾಗಿ ಹಲವೆಡೆ ಮರಗಳು ಉರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇಂದು ಕೂಡಾ ಸಮರ್ಪಕವಾಗಿ ವಿದ್ಯುತ್ ಇರಲಿಲ್ಲ ಇದರ ನಡುವೆ ಇಂದಿನ ಮಳೆಯಿಂದಾಗಿ ಸುಳ್ಯ ಕತ್ತಲಲ್ಲಿ ಫಿಕ್ಸ್ ಆಗಲಿದೆಯೆ.?
