ವಿಂಬಲ್ಡನ್ 2024ರ ಫೈನಲ್ ಪಂದ್ಯದಲ್ಲಿ 2ನೇ ಬಾರಿಗೆ ಗೆದ್ದು ಬೀಗಿದ್ದಾರೆ ಕಾರ್ಲೋಸ್ ಅಲ್ಕರಾಜ್ . 24 ಗ್ರ್ಯಾಂಡ್ ಸ್ಲಾಮ್ ಒಡೆಯ ಜೋಕೋವಿಕ್ಗೆ ಮತ್ತೊಮ್ಮೆ ನಿರಾಸೆಯಾಗಿದೆ.ಸೆಂಟರ್ ಕೋರ್ಟ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೊವಾಕ್ ಜೋಕೋವಿಕ್ಗೆ ಅವರನ್ನು ಕಾಲೋರ್ಸ್ ಅಲ್ಕರಾಜ್ ನೇರ ಸೆಟ್ಗಳಿಂದ ಸೋಲಿಸಿದ್ದಾರೆ. ಅಲ್ಕರಾಜ್ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು. ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಕ್ರೋಕೆಟ್ ಕ್ಲಬ್ನಲ್ಲಿ ಕಳೆದ ವರ್ಷದ ಫೈನಲ್ನಲ್ಲಿ ಅಲ್ಕರಾಜ್ 6-2, 6-2, 7-6 (4) ರಿಂದ ಕೇವಲ ಮೂರು ಗಂಟೆಗಳಲ್ಲಿ ಜೋಕೋವಿಕ್ ಅವರನ್ನು ಸೋಲಿಸಿದ್ದರು. ಅಲ್ಕರಾಜ್ ಈಗ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಅನ್ನು ಬ್ಯಾಕ್ ಟು ಬ್ಯಾಕ್ ಗೆದ್ದ ಆರನೇ ವ್ಯಕ್ತಿಯಾಗಿದ್ದಾರೆ.
24 ಗ್ರ್ಯಾಂಡ್ ಸ್ಲಾಮ್ ಒಡೆಯ ಜೋಕೋವಿಕ್ಗೆ ಸೋಲು!
ಒತ್ತಡದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತು ಏಳು ಬಾರಿಯ ಚಾಂಪಿಯನ್ ನೊವಾಕ್ ಜೋಕೋವಿಕ್ ಅವರನ್ನು 6-2, 6-2, 7-6 (4) ಸೆಟ್ಗಳಿಂದ 21ರ ಯುವಕ ಸೋಲಿಸಿದ್ದಾರೆ. ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿದ್ದಾರೆ. ಅಲ್ಕರಾಜ್ ಈಗ ನಾಲ್ಕು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ರೋಜರ್ ಫೆಡರರ್ ಬಳಿಕ ತಮ್ಮ ಮೊದಲ ನಾಲ್ಕು ಗ್ರ್ಯಾಂಡ್ ಸ್ಲಾಮ್ ಫೈನಲ್ಗಳನ್ನು ಗೆದ್ದ ಏಕೈಕ ಪುರುಷರಾಗಿ ಸೇರಿಕೊಂಡರು.


ಜೋಕೋವಿಕ್ ಮೂರನೇ ಸೆಟ್ನಲ್ಲಿ ಫೈಟ್ಬ್ಯಾಕ್ ಅನ್ನು ಪ್ರದರ್ಶಿಸಿದರು. ಟೈ-ಬ್ರೇಕರ್ಗೆ ಆಟವನ್ನು ತಳ್ಳಿದರು. ಆದರೆ ಅಲ್ಕರಾಜ್ ಸೆಂಟರ್ ಕೋರ್ಟ್ನಲ್ಲಿ ಕ್ಲಿನಿಕಲ್ ಗೆಲುವು ಸಾಧಿಸಲು ತಮ್ಮ ವೃತ್ತಿಜೀವನದ ಅತ್ಯುತ್ತಮ ಆಟಗಳಲ್ಲಿ ಒಂದನ್ನು ಆಡಿದರು.