ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕೂಡ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಯುವ ಜನತೆ ಪ್ರಾಣ ಚೆಲ್ಲುತ್ತಿದ್ದು, ಇದು ಹಲವರಲ್ಲಿ ಆತಂಕವನ್ನು ನಿರ್ಮಾಣ ಮಾಡಿದೆ. ಈ ನಡುವೆ ಹಲವು ಮಂದಿ ಆಸ್ಪತ್ರೆಗಳಲ್ಲಿ (Hospetal) ಕ್ಯೂ ನಿಲ್ಲುತ್ತಿದ್ದು, ತಮ್ಮ ಆರೋಗ್ಯವನ್ನು (Helth) ತಪಾಸಣೆ ಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೇ ವೈದ್ಯರು ಕೂಡ ರೋಗಿಗಳ ಆರೋಗ್ಯವನ್ನು ತಪಾಸಣೆ ಮಾಡುತ್ತಿರುವುದು ಕಂಡು ಬಂದಿದೆ. ಈ ನಡುವೆ ರಾಜ್ಯ ಆರೋಗ್ಯ ಇಲಾಖೆಯು (State Health Department) ಕೆಲವು ಮಾಹಿತಿಯನ್ನು ಹಂಚಿಕೊಂಡಿದೆ ಅದರಂತೆ. ನಿಮ್ಮ ಸುತ್ತ ಮುತ್ತ ಯಾರಾದರೂ ಕುಸಿದು ಬಿದ್ದಾಗ ಏನು ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದು ಅದು ಕೆಳಕಂಡತಿದೆ. ಎದೆನೋವು, ಉಸಿರಾಟದ ತೊಂದರೆ, ಒಸಡು ಅಥವಾ ತೋಳಿನಲ್ಲಿ ನೋವು, ಬೆವರುವಿಕೆ ಅಥವಾ ತಲೆತಿರುಗುವಿಕೆಯ ಅನುಭವವಾಗುತ್ತಿದೆಯೇ? ನಿರ್ಲಕ್ಷಿಸದಿರಿ. ನಿಮಗೆ ಅಥವಾ ನಿಮ್ಮ ಸುತ್ತಲಿನವರಿಗೆ ಈ ಲಕ್ಷಣಗಳಿದ್ದರೆ ತಕ್ಷಣವೇ 108ಕ್ಕೆ ಕರೆಮಾಡಿ ಅಥವಾ ಸಮೀಪದ ಆಸ್ಪತ್ರೆಗೆ ತೆರಳಿ,
ನೆನಪಿಡಿ: ಗೋಲ್ಡನ್ ಅವರ್ ಆರೈಕೆಯು ಜೀವಗಳನ್ನು ಉಳಿಸಬಹುದಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಆರೊಗ್ಯ ಇಲಾಖೆಯು ಮಹತ್ವದ ಮಾಹಿತಿಯನ್ನು ನೀಡಿದೆ ಅದರಂತೆ ಮೊದಲು ರೋಗಿಯು ಉಸಿರಾಡುತ್ತಿದ್ದಾರೆಯೇ ಎಂದು ಪರಿಶೀಲಿಸಿ. ಆಂಬುಲೆನ್ಸ್‌ಗೆ (Ambulance)
ತಕ್ಷಣವೇ ಕರೆ ಮಾಡಿ ಅಂತ ತಿಳಿಸಿದೆ.

