ಇತ್ತೀಚೆಗೆ ಕರ್ನಾಟಕ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಖಾಲಿದ್ ಉಜಿರೆ ಯವರನ್ನು ಸುಳ್ಯ ಜನತಾ ವಿಲ್ಲಾ ದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಕೆವಿಜಿ ಮೆಡಿಕಲ್ ಕಾಲೇಜು ನಿರ್ದೇಶಕ ಕೆ. ಸಿ. ಅಕ್ಷಯ್ ಮತ್ತು ಮೆಲ್ಕಾರ್ ಹಿರಿಯ ಉದ್ಯಮಿ ಇಲ್ಯಾಸ್ ರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಜನತಾ ಗ್ರೂಪ್ಸ್ ನ ಹಮೀದ್ ಜನತಾ, ಸಫ್ವಾನ್ ಜನತಾ, ಮಂಗಳೂರಿನ ಕಡಬ ಮೂಲದ ಉದ್ಯಮಿ ಶಾಕೀರ್ ಹಾಜಿ ಹೈಸo ಸ್ಟೀಲ್, ಹಜ್ಜಾಜ್ ಗ್ರೂಪ್ ಮಹಮ್ಮದ್, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಇಂಟಕ್ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.