ಸುಳ್ಯ: ಕೆಲವು ದಿನಗಳಿಂದ ಪೈಚಾರು, ಶಾಂತಿನಗರ, ಕುಂಬರ್ಚೋಡು ಓಡಬಾಯಿ ಹೀಗೆ ಸುಳ್ಯ ಪರಿಸರದಿಂದ ವ್ಯಾಪಕವಾಗಿ ಗ್ಯಾಸ್ ಸಿಲಿಂಡರ್ ಕಳ್ಳತನವಾಗುತ್ತಿದೆ. ರಾತ್ರಿ ಹೊತ್ತು ನಿರಂತರವಾಗಿ ಈ ಕಳ್ಳತನ ನಡೆಯುತ್ತಿದ್ದು, ಈ ಭಾಗದ ಜನರು ಎಚ್ಚರ ವಹಿಸಬೇಕಾಗಿದೆ. ಗ್ಯಾಸ್ ಸಿಲಿಂಡರ್ ಆದ ಕಾರಣ ಯಾರೂ ಇದುವರೆಗೆ ಪೊಲೀಸ್ ದೂರು ದಾಖಲಿಸುತ್ತಿಲ್ಲ. ಇದು ಕಳ್ಳರಿಗೆ ವರದಾನವಾಗಿದೆ.

ಕಳೆದ ಕೆಲವು ತಿಂಗಳಿನಿಂದ ಅನೇಕ ಸಿಲಿಂಡರುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಸಂಕಲೆ ಉಪಯೋಗಿಸಿ ಬೀಗಹಾಕಿದ ಮತ್ತು ಕಬ್ಬಿಣದ ಗೂಡುಗಳೊಳಗೆ ಸುರಕ್ಷಿತವಾಗಿ ಇರಿಸಿದ ಸಿಲಿಂಡರುಗಳನ್ನು ಕೂಡ ಈ ಕದೀಮರು ಕೊಂಡೊಯ್ದಿದ್ದಾರೆ. ಸಿಲಿಂಡರುಗಳನ್ನು ಮನೆಯೊಳಗೆ ಅಥವಾ ಭದ್ರವಾಗಿ ಸಂಕಲೆ ಅಥವಾ ಗೂಡುಗಳಲ್ಲಿಡುವುದು ಮತ್ತು ಮನೆಗಳಿಗೆ ಸಿಸಿ ಕ್ಯಾಮರಗಳನ್ನು ಅಳವಡಿಸುವುದರ ಮೂಲಕ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕಾಗಿದೆ. ಪೊಲೀಸ್ ಇಲಾಖೆಯೂ ಈ ಬಗ್ಗೆ ಗಂಭೀರ ಕ್ರಮವನ್ನು ಕೈಗೊಳ್ಳಬೇಕಾಗಿದೆಯೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ