ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಅವರ ಮೂಗಿನಿಂದ ರಕ್ತ ಸೋರಿಕೆಯಾಗಿದ್ದು ಅವರನ್ನು ಕೂಡಲೇ ಅಪೊಲೊ ಆಸ್ಪತ್ರೆಗೆ ದಾಖಲಿಸಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡಬೇಡಿ ಎಂದು ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ಹೇಳಿದ್ದಾರೆ. ಆಸ್ಪತ್ರೆ ಬಳಿ ಮಾತನಾಡಿ, ಹಲವು ತಿಂಗಳುಗಳಿಂದ ನಿರಂತರವಾಗಿ ಕುಮಾರಸ್ವಾಮಿ ಅವರು ದಣಿದಿದ್ದಾರೆ. ಕೇಂದ್ರ ಸಚಿವರಾದ ಮೇಲೆ ಹೆಚ್ಚು ಕೆಲಸದ ಒತ್ತಡ, ಓಡಾಟವಾಗಿದೆ. ಕುಮಾರಣ್ಣ ಮೇಲೆ ತಂದೆ-ತಾಯಿ ಆಶೀರ್ವಾದವಿದೆ. ಅವರಿಗೆ 3ನೇ ಬಾರಿಗೆ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ. ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಸದ್ಯ ಕ್ಷೇಮವಾಗಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ನಿಖಿಲ್ ಅವರು ತಿಳಿಸಿದ್ದಾರೆ.