ಮುಸ್ಲಿಂ ಸಮುದಾಯದ ಸಾಮಾಜಿಕ ಅಗತ್ಯತೆಗಳಲ್ಲಿ ಒಂದಾದ ಬೌದ್ಧಿಕ ಶಿಕ್ಷಣಕ್ಕೆ ಪ್ರೋತ್ಸಾಹ, ಉತ್ತೇಜನ, ಮಾರ್ಗದರ್ಶನ ಮತ್ತು ಮಾಹಿತಿ ನೀಡುವ ಸಲುವಾಗಿ nLight Academy ಯ ಮೂಲಕ ವೃತ್ತಿಪರ ಸಾಮಾನ ಮನಸ್ಕ ಯುವಕರು ಸುಳ್ಯವನ್ನು ಕೇಂದ್ರೀಕರಿಸಿ ಕಳೆದ 4 ವರ್ಷಗಳಿಂದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುಕೊಂಡು ಬಂದಿದ್ದು. ಸಮಾಜದ ಬಹುಜನರ ಅಪೇಕ್ಷೆಯಂತೆ ಅದನ್ನು ಸದಾ ಸಮಯ ಸಮಾಜದ ಶೈಕ್ಷಣಿಕ ಸೇವೆಗೆ ಅಧಿಕೃತ ಸಂಸ್ಥೆಯಾಗಿ ನೋಂದಾವಣೆಗೊಂಡು ಸ್ವತಃ ಕಚೇರಿ ಮತ್ತು ತರಬೇತು ಕೇಂದ್ರವನ್ನು ಇದೇ ಬರುವ 11 ಆಗಸ್ಟ್ 2024, ಭಾನುವಾರ, ಸಮಯ ಬೆಳಿಗ್ಗೆ 9.15ರಿಂದ ಮಧ್ಯಾಹ್ನ 12.15 ರ ವರೆಗೆ, ಸ್ಥಳ:ಪಿ.ಎ ಆರ್ಕೆಡ್, ಗಾಂಧಿನಗರ ಸುಳ್ಯ ದಲ್ಲಿ
ಭಾನುವಾರ ಬೆಳಿಗ್ಗೆ ಕಛೇರಿ ಉದ್ಘಾಟನೆ, ಸಂಸ್ಥೆಯ ಲೋಕಾರ್ಪಣೆ ಮತ್ತು ಮಾಹಿತಿ ಕಾರ್ಯಗಾರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಿಮ್ಮ ಶೈಕ್ಷಣಿಕ ಸಾಧನೆಗಾಗಿ ವಿಶೇಷ ಆಹ್ವಾನಿತರನ್ನಾಗಿ ತಮ್ಮನ್ನು ಪ್ರೀತಿಪೂರ್ವಕ ಆಹ್ವಾನಿಸುತ್ತಿದ್ದೇವ ಮತ್ತು ನಮ್ಮ ಕಾರ್ಯ ಚಟುವಟಿಕೆಗಳಿಗೆ ತಮ್ಮ ಸಹಕಾರವನ್ನು ಕೋರುತ್ತಿದ್ದೇವೆ.