Category: ಕ್ರೈಂ

ಮಂಗಳೂರು: ಕುಕ್ಕರ್ ಸ್ಫೋಟ ಪ್ರಕರಣ; ಸ್ಪೋಟಿಸಿದ್ದು ಸಿದ್ದು ನಾವೇ’ – ಹೊಣೆ ಹೊತ್ತ ಐಎಸ್‌ಕೆಪಿ ಉಗ್ರ ಸಂಘಟನೆ

ನವದೆಹಲಿ: ಕಳೆದ ವರ್ಷ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ನಡೆದ ಸ್ಫೋಟಗಳ ಹೊಣೆಯನ್ನು ಖೊರಾಸಾನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ (ಐಎಸ್‌ಕೆಪಿ) ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದ್ದು, ವಿಶ್ವಸಂಸ್ಥೆ ಘೋಷಿತ ಭಯೋತ್ಪಾದಕ ಸಂಘಟನೆಯಾದ ಐಎಸ್‌ಕೆಪಿಯ ನಿಯತಕಾಲಿಕ ‘ವಾಯ್ಸ್ ಆಫ್ ಖುರಾಸನ್’ ನ 68 ಪುಟಗಳ ಇತ್ತೀಚಿನ ಸಂಚಿಕೆಯನ್ನು…

PSG ತಂಡದ ಪ್ರಮುಖ ಡಿಫೆಂಡರ್ ಆಟಗಾರ ಆಶ್ರಫ್ ಹಕಿಮಿ ವಿರುದ್ಧ ಅತ್ಯಾಚಾರ ಆರೋಪ

ರಾಷ್ಟ್ರೀಯ ತಂಡ ಮೊರಾಕೊ ಹಾಗೂ ಕ್ಲಬ್ ತಂಡವಾದ ಪಿ.ಎಸ್.ಜಿ ತಂಡದ ಸ್ಟಾರ್ ಫುಟ್ಬಾಲ್ ಡಿಫೆಂಡರ್ ಆಟಗಾರ  ಅಶ್ರಫ್ ಹಕಿಮಿ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿದ್ದಾರೆ.  ಈ ವಿಚಾರವನ್ನು ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.23 ವರ್ಷದ ಯುವತಿ ಅಶ್ರಫ್ ಹಕಿಮಿ…

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

ಬೆಂಗಳೂರು: ಬಿಜೆಪಿ ಯುವಮೋರ್ಚಾ ಜಿಲ್ಲಾ‌ ಕಾರ್ಯಕಾರಿಣಿ ಸಮಿತಿ ಸದಸ್ಯ ಸುಳ್ಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿರುವುದಾಗಿ ವರದಿಯಾಗಿದೆ. ಮಡಿಕೇರಿ ಮೂಲದ ತುಫೈಲ್ ಬಂಧಿತ ಆರೋಪಿ. ಈ ಮೊದಲು ಎನ್.ಐ.ಎ ತಂಡ…

ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್ ಹರಿದು ದ್ವಿಚಕ್ರ ವಾಹನ ಸವಾರ ಮೃತ್ಯು

ಕಾಸರಗೋಡು: ಕೇರಳ ಸರಕಾರಿ ಬಸ್ (ಕೆಎಸ್ಸಾರ್ಟಿಸಿ) ಬಸ್ ಹರಿದು ಸ್ಕೂಟರ್ ಸವಾರ ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಗರದ ಎಂ.ಜಿ. ರಸ್ತೆಯ ಹಳೆ ಬಸ್ ನಿಲ್ದಾಣ ಬಳಿ ನಡೆದಿದೆ. ಮೊಗ್ರಾಲ್ ಪುತ್ತೂರು, ಕಡವತ್ ಮೊಗರಿನ 23 ವರ್ಷ ವಯಸ್ಸಿನ ಮುಹಮ್ಮದ್…

ಮಡಿಕೇರಿ: ಸುಳ್ಯದ ದೋಸ್ತ್ ವಾಹನಕ್ಕೆ ಕಾರು ಢಿಕ್ಕಿ; ಚಾಲಕ ಪಾರು

ಸುಳ್ಯ: ಇಲ್ಲಿನ ಬಿ ಎಂ ಎ ಫ್ರೂಟ್ ಅಂಡ್ ವೆಜಿಟೇಬಲ್ ಸಂಸ್ಥೆಗೆ ಸೇರಿದ ಅಶೋಕ್ ಲೆಲ್ಯಾಂಡ್ ದೋಸ್ತ್ ವಾಹನ ಮಡಿಕೇರಿ ಕಡೆ ಹೋಗುತ್ತಿರುವ ಸಂದರ್ಭ ವಿರುದ್ಧ ದಿಕ್ಕಿನಿಂದ ಸುಳ್ಯದತ್ತ ಆಗಮಿಸುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ದೋಸ್ತ್ ವಾಹನ ಪಲ್ಟಿಯಾದ ಘಟನೆ…

ಪುತ್ತೂರು: ಸಂಟ್ಯಾರ್ ಬಳಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು, ತೋಟಕ್ಕೆ ಬಿದ್ದ ಕಾರು
ಭೀಕರ ಅಪಘಾತಕ್ಕೆ ಓರ್ವ ಸ್ಥಳದಲ್ಲೇ ಸಾವು; ಇಬ್ಬರಿಗೆ ಗಾಯ

ಪುತ್ತೂರು: ಸಂಟ್ಯಾರು ಮತ್ತು ಕೈಕಾರ ರಸ್ತೆಯ ನಡುವಿನ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು ಜೊತೆಗೆ ಐದಾರು ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಕಾರನ್ನು ಇದೀಗ ಕ್ರೈನ್ ಮೂಲಕ…

ನೂತನ ಉಪನಿರೀಕ್ಷಕರಾಗಿ (ತನಿಖಾ) ಶಾಹಿದ್ ಆಫ್ರಿದಿ ಐ.ಬಿ. ಸುಳ್ಯ ಕ್ಕೆ

ಸುಳ್ಯ: ಪೊಲೀಸ್ ಠಾಣಾ ಉಪನಿರೀಕ್ಷಕರಾಗಿ ಸೇವೆಯಲ್ಲಿದ್ದ ರತ್ನಕುಮಾರ್ ರವರು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು, ಸುಳ್ಯ ಠಾಣೆಗೆ ನೂತನ ಉಪನಿರೀಕ್ಷಕರಾಗಿ ಶಾಹಿದ್ ಆಫ್ರಿದಿ ಐಬಿ ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆಫ್ರಿದಿ ರವರು ಬೀರೂರು ನಿವಾಸಿಯಾಗಿದ್ದು ಚಿಕ್ಕಮಂಗಳೂರು ತಾಲೂಕಿನ ಸಿಂಗಟಕರೆ ಪೊಲೀಸ್…

ಜಯನಗರ: ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು.

ಸುಳ್ಯ: ಇಲ್ಲಿನ ಜಯನಗರ ನಿವಾಸಿ ಸಂದೀಪ್ (20ವರ್ಷ)ಎಂಬ ಯುವಕ ಒಂದು ವಾರದ ಹಿಂದೆ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪೆರಾಜೆ: ಪಿಕಪ್ ಹಾಗೂ ಬೈಕ್ ನಡುವೆ ಅಪಘಾತ; ಓರ್ವ ಗಂಭೀರ

ಪರಾಜೆ: ಸುಳ್ಯ ಕಡೆಯಿಂದ ಅರಂತೋಡು ಕಡೆಗೆ ಸಿಮೆಂಟ್ ಕೊಂಡೊಯ್ಯುತ್ತಿದ್ದ ಪಿಕಪ್, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಮಹ ಎಫ್ ಝಡ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿನ ಇಬ್ಬರು ಸವಾರರಿದ್ದು, ಇಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ, ಅದರಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ, ಎಂದು…

ಕೊಡಗು: ಸೈಬರ್ ಕ್ರೈಂ; ಗುಡ್ಡೆಹೊಸೂರು ಯುವಕನ ಬಂಧನ

ಗುಡ್ಡೆಹೊಸೂರು : ವರ್ತಕರೊಬ್ಬರ ಮೊಬೈಲ್ ಫೋನ್ ಮೂಲಕ ಫೋನ್ ಪೇ ಹಾಗೂ ಗೂಗಲ್ ಪೇ ಆಪ್ ನ್ನು ಬಳಸಿ ₹4,76,456 ನ್ನು ಸ್ನೇಹಿತರ ಖಾತೆಗಳಿಗೆ ವರ್ಗಾಯಿಸಿಕೊಂಡ ಆರೋಪದಡಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದಿರುವ ಘಟನೆ ವರದಿಯಾಗಿದೆ. ಕುಶಾಲನಗರ ಸಮೀಪ ಗುಡ್ಡೆಹೊಸೂರುವಿನ ಬೊಳ್ಳೂರು ಗ್ರಾಮದ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ