ಶಾಂತಿನಗರ: ಅಗಸ್ಟ್ ೧೫ ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪೂರ್ವಾಹ್ನ 9.30 ಕೆ ಧ್ವಜಾರೋಹಣ ಕಾರ್ಯಕ್ರಮವನ್ನು ಅಧ್ಯಕ್ಷರಾದ ಶ್ರೀ ಮಹಮ್ಮದ್ ನಝೀರ್ ರವರು ನೆರವೇರಿಸಿದರು ಬಳಿಕ ಶಾಲಾ ಮಕ್ಕಳ ಪಥ ಸಂಚಲನ ಕಾರ್ಯಕ್ರಮ ಪೈಚಾರ್ ವರೆಗೂ ನಡೆಯಿತು, ಶಾಲಾ ಮಕ್ಕಳು, ಪೋಷಕರು ಈ ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗಿಯಾದರು. ಬಳಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಭಾ ಕಾರ್ಯಕ್ರಮ ಮತ್ತು ಶಾಲಾ ಮುಖ್ಯ ಗುರುಗಳ ಬೀಳ್ಕೊಡುಗೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಶಾಲಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಶ್ರೀ ಮುಹಮ್ಮದ್ ನಝೀರ್ ,ಮುಖ್ಯ ಅತಿಥಿಗಳಾಗಿ ಸುಳ್ಯ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ ಕೆ, ಮಾಜಿ ಯೋಧರಾದ ಶ್ರೀ ಗಣೇಶ್ ಕೆ ,ಶ್ರೀ ಚಂದ್ರಹಾಸ ಮತ್ತು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ರಿಫಾಯಿ ಎಸ್. ಎ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡು ತೆರಳಲಿರುವ ಮುಖ್ಯ ಗುರುಗಳಾದ ಶ್ರೀಮತಿ ತುಳಸಿ ಕೆ ಇವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಎ.ಡಿ.ಎಂ.ಸಿ ಶಿಕ್ಷಕ ವೃಂದ ಮತ್ತು ಪೋಷಕರ ವತಿಯಿಂದ ನೆರವೇರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು ಕಾರ್ಯಕ್ರಮವನ್ನು ಕುಮಾರಿ ರಮ್ಯಶ್ರೀ ಡಿ ನೆರವೇರಿಸಿದರು. ಸ್ವಾಗತವನ್ನು ಮುಖ್ಯ ಗುರುಗಳಾದ ಶ್ರೀಮತಿ ತುಳಸಿಕೆ ಮತ್ತು ಧನ್ಯವಾದವನ್ನು ಶ್ರೀಮತಿ ಪವಿತ್ರ ಕೆ ಇವರು ನಿರ್ವಹಿಸಿದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ದೈಹಿಕ ಶಿಕ್ಷಕರಾದ ರಘುನಾಥ ರೈ ಯವರು ವಹಿಸಿದರು.