ಅಂಬರನಾಥ ಅಗಸ್ಟ್ 21: ಕೌಟುಂಬಿಕ ಕಲಹಕ್ಕೆ ಹಲ್ಲೆ ನಡೆಸುವುದು ಮಾಮೂಲಿ ಆದರೆ ಇಲ್ಲೊಂದು ಗಲಾಟೆ ರಸ್ತೆಗೆ ಬಂದಿದ್ದು, ಎರಡು ಕಾರುಗಳನ್ನು ಬಳಸಿ ಹೊಡೆದಾಡಿಕೊಂಡಿದ್ದಾರೆ. ಅಂಬರನಾಥ್-ಬದ್ಲಾಪುರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ ಎರಡು ಕುಟಂಬಗಳ ನಡುವೆ ರಸ್ತೆಯಲ್ಲಿ ಗಲಾಟೆ ನಡೆದಿತ್ತು, ಟಾಟಾ ಸಫಾರಿ ಓಡಿಸಿದ ವ್ಯಕ್ತಿ ಮತ್ತು ಅವರ ಪತ್ನಿ ವೈವಾಹಿಕ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ಶಂಕಿಸಲಾಗಿದೆ.
ರಕ್ಷಣಾ ಇಲಾಖೆಯಿಂದ ನಿವೃತ್ತರಾಗಿರುವ ವ್ಯಕ್ತಿಯ ತಂದೆ ಮುಂಬೈನಲ್ಲಿ ಪತ್ನಿ ಮತ್ತು ಇನ್ನೊಬ್ಬ ಮಗನೊಂದಿಗೆ ವಾಸಿಸುತ್ತಿದ್ದರು. ತಂದೆ, ತಾಯಿ ಮತ್ತು ಅವರ ಎರಡನೇ ಮಗ ಮುಂಬೈನಿಂದ ಬದ್ಲಾಪುರಕ್ಕೆ ಬಂದಿದ್ದು, ಇನ್ನೊಬ್ಬ ಮಗ ಮತ್ತು ಅವನ ಹೆಂಡತಿಯ ನಡುವಿನ ವಿವಾದವನ್ನು ಬಗೆಹರಿಸಲು ಬಂದಿದ್ದರು. ಈ ವಿಚಾರವಾಗಿ ತಂದೆ ಮತ್ತು ಮಗ ಜಗಳವಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಗಳ ತಾರಕಕ್ಕೇರಿದ ಬಳಿಕ ತಂದೆ ಮತ್ತು ಮಗ ಇಬ್ಬರು ಎರಡು ಕಾರುಗಳನ್ನು ಏರಿ ರಸ್ತೆಯಲ್ಲೆ ಹೊಡೆದಾಟ ಪ್ರಾರಂಭಿಸಿದ್ದಾರೆ. ಟಾಟಾ ಸಫಾರಿ ಹಾಗೂ ಫಾರ್ಚೂನರ್ ಕಾರನ್ನು ಮುಖಾಮುಖಿಯಾಗಿ ಡಿಕ್ಕಿ ಹೊಡೆಸಿಕೊಂಡ ತಂದೆ ಮಗ. ಈ ವೇಳೆ ಟಾಟಾ ಸಫಾರಿ ಗುದ್ದಿದ ರಭಸಕ್ಕೆ ಪಾರ್ಚೂರ್ ಕಾರು ಹಿಂದಕ್ಕೆ ಚಲಿಸಿ ಕಾರಿನ ಹಿಂದೆ ಬೈಕ್ ನಲ್ಲ ಮೂವರಿಗೆ ಗಂಭಿರ ಗಾಯಗಳಾಗಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಂಬರನಾಥ್ ಮತ್ತು ಉಲ್ಲಾಸ್ನಗರದ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.