ಸುಳ್ಯ: ಸುಳ್ಯ ಠಾಣಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆಯು ದಿನಾಂಕ 30-08-2024 ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಈರಯ್ಯ ದುಂತೂರು ಪೊಲೀಸ್ ಉಪನೀರಿಕ್ಷಕರು
ರವರ ನೇತೃತ್ವದಲ್ಲಿ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಸಮಯ ಶಾಂತಿ ಕಾಪಾಡಿಕೊಳ್ಳುವಂತೆ ಸುಳ್ಯ ಠಾಣಾ ವ್ಯಾಪ್ತಿಯ ಸರ್ವ ಧರ್ಮಗಳ ಮುಖಂಡರುಗಳನ್ನು ಠಾಣೆಗೆ ಕರೆಸಿ ಶಾಂತಿಸಭೆ ನಡೆಸಲಾಯಿತು ಈ ಸಭೆಯಲ್ಲಿ ಸರ್ವ ಧರ್ಮಗಳ ಪ್ರಮುಖರು ರಾಜಕೀಯ ನಾಯಕರುಗಳು ಉಪಸ್ಥಿತರಿದ್ದರು