ಮಂಗಳೂರು ಅಳಪೆ -ಪಡೀಲ್ ನಲ್ಲಿ ಚಿಪ್ತಾರ ಮಹಿಳಾ ಮಂಡಳಿ ಉದ್ಘಾಟನೆ ಹಾಗೂ ಮಹಿಳಾ ಸಬಲೀಕರಣ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.
ಭಾರತ ಸರಕಾರ ಯುವಜನ ಕಾರ್ಯ,ಕ್ರೀಡಾ ಸಚಿವಾಲಯ, ಓಜಸ್ ಏನ್ ಜಿ ಓ ಮಗಳೂರು ಇದರ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮಾಜಿಕ ಹೋರಾಟಗಾರರಾದ ಶ್ರೀಮತಿ ಪ್ರಸನ್ನ ರವಿ ವಹಿಸಿದ್ದರು.ಓಜಸ್ ಸಂಸ್ಥೆಯ ಎಂ ಡಿ ಶ್ರೀಮತಿ ಮಂಗಳಾ ನಂದಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನೆಹರು ಯುವ ಕೇಂದ್ರದ ಮುಖಂಡರಾದ ಜಗದೀಶ್,ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ,ನಿವೃತ್ತ ಕುಲ ಸಚಿವ ಪ್ರೊಪೇಷರ್ ವಿನಿತಾ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಮಂಗಳ ನಂದಕುಮಾರ್ ‘ಓಜಸ್ ಸಂಸ್ಥೆಯು ಸಮಾಜದಲ್ಲಿ ಎಲ್ಲಾ ವರ್ಗದ ಜನತೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೆಲಸ ಕಾರ್ಯ ಮಾಡುತ್ತಿದ್ದು ಇದೇ ರೀತಿಯಲ್ಲಿ ಇಂದು ಉದ್ಘಾಟನೆ ಗೊಂಡ ಚಿಪ್ತಾರ ಮಹಿಳಾ ಮಂಡಳಿಯೂ ಉತ್ತಮ ಕಾರ್ಯಗಳನ್ನು ಮಾಡಬೇಕು. ಇದಕ್ಕೆ ನಮ್ಮ ಸಹಕಾರ ಸಂಪೂರ್ಣವಾಗಿ ನೀಡುತ್ತೇವೆ ಎಂದು ಶುಭಾರೈಸಿದರು.ನೆಹರು ಯುವ ಕೇಂದ್ರದ ಕೆ ಜಗದೀಶ್ ರವರು ಮಾತನಾಡಿ ‘ಸರಕಾರವು ಯುವ ಜನತೆಗೆ ಪೂರಕವಾಗಿ ಮಹಿಳಾ ಮಂಡಳ, ಯುವಕ ಮಂಡಲ, ಯುವ ಜನ ಸಂಯುಕ್ತ ಮಂಡಳಿ ಇದಕ್ಕೆಲ್ಲಾ ಉತ್ತಮ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು ಸವಲತ್ತುಗಳನ್ನು ನೀಡಿ ಸಹಕರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯವರು ಅಯುಷ್ಮಾನ್ ಯೋಜನೆ ಮತ್ತು ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆದರ್ಶ ಮಹಿಳಾ ಮಂಡಲ,ಮಹಿಳಾ ಬಧುತ್ವ ವೇದಿಕೆ,ಪ್ರಶಾಂತಿ ಮಹಿಳಾ ಮಂಡಲ,ಓಜನ್ ಎನ್ ಜಿ ಓ,ಚಿತ್ತಾರ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.
ಶ್ರೀಮತಿ ಉಷಾ ಸಂಘದ ಪ್ರಸ್ತಾವನೆ ಮಾಡಿದರು.
ಚಿತ್ತಾರ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಪ್ರೇಮಿ ಫೆರ್ನಾಡಿಸ್ ಸ್ವಾಗತಿಸಿ ಸದಸ್ಯರಾದ ಶೋಭಾ ವಂದಿಸಿದರು.ಚಿತ್ತಾರ ಸಂಘ ದ ಸದಸ್ಯರು ಆಶಯ ಗೀತೆ ಹಾಡಿದರು.ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.