ಅರಂಬೂರು ಸೆ.06 :- ಇಲ್ಲಿನ ಹಿದಾಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಕಲಾ ಸಾಂಸ್ಕೃತಿಕ ಕಾರ್ಯಕ್ರಮ “BREEZE OF MADEENA MEELAD FEST-24” ರ ಲೋಗೋ ಜಂಕ್ಷನ್ ನ ಉದ್ಘಾಟನೆಯು ಸಂಜೆ ಮಸೀದಿ ವಠಾರದಲ್ಲಿ ನಡೆಯಿತು. ಘಟಕದ ಉದ್ಘಾಟನೆಯನ್ನು ಮಸೀದಿ ಅಧ್ಯಕ್ಷರಾದ ಹಾಜಿ ಭಾಷಾ ಸಾಹೇಬ್ ನಡೆಸಿದರು. ಮಸೀದಿ ಖತೀಬರಾದ ಬಹು|ಮುಈನುದ್ದೀನ್ ಫೈಝಿ ರವರು ಶುಭಾಶಂಸನೆ ಗೈದರು. ಕಾರ್ಯಕ್ರಮದಲ್ಲಿ ಅಲ್ ಅಮೀನ್ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಊರವರು ಉಪಸ್ಥಿತರಿದ್ದರು.