ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರು ಪಲ್ಟಿಯಾದ ಘಟನೆ ಕಾವು ಸಮೀಪದ ನನ್ಯದಲ್ಲಿ ನಡೆದಿದೆ. ಓವರ್ ಸ್ಪೀಡ್ ನಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಚರಂಡಿಗೆ ಉರುಳಿ ಬಿದ್ದಿದೆ.
ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಆಗಮಿಸುತ್ತಿದ್ದ ಕಾರು ಕಾವು ಸಮೀಪದ ನನ್ಯದಲ್ಲಿ ಅಪಘಾತಕ್ಕೆ ಇಡಾಗಿದೆ. ಕಾರಿನಲ್ಲಿ ಒಟ್ಟು 5 ಮಂದಿ ಪ್ರಯಾಣಿಸುತ್ತಿದ್ದು,ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರು ಪಳ್ಳತ್ತೂರಿನವರು ಎಂದು ತಿಳಿದು ಬಂದಿರುತ್ತದೆ.