ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಇನ್ನು ಮುಂದೆ ರಾತ್ರಿ 11:00 pm ಗಂಟೆ ನಂತರ ಹೋಟೆಲ್ ತೆರೆಯುವಂತಿಲ್ಲ ಎಂದು ಖಡಕ್ ವಾರ್ನಿಂಗ್ ಅನ್ನು ಪೊಲೀಸರು ರವಾನಿಸಿದ್ದಾರೆ.
ಈ ಮೂಲಕ ಕಟ್ಟು ನಿಟ್ಟಿನ ನಿಯಮವನ್ನು ಜಾರಿಗೆ ತಂದಿದ್ದಾರೆ. ಬೇರೆ ತಾಲೂಕುಗಳಲ್ಲಿ ಈಗಾಗಲೇ ಇರುವ ನಿಯಮ ಸುಳ್ಯ ತಾಲೂಕಿನಾದ್ಯಂತ ಜಾರಿಗೆ ಬಂದಿರಲಿಲ್ಲ. ಇದೀಗ ಇಲ್ಲಿಯ ಈ ಹೊಸ ನಿರ್ಧಾರದಿಂದ ಹೋಟೆಲ್ ಮಾಲೀಕರಿಗೆ ನಿರಾಸೆಯನ್ನುಂಟು ಮಾಡಿದೆ. ಕಳೆದ ಎರಡು ವರ್ಷದಿಂದ ತಡರಾತ್ರಿ 11 ಗಂಟೆ ಮೇಲೆಯೂ ಹೋಟೆಲ್ ಅನ್ನು ತೆರೆಯಲಾಗುತ್ತಿತ್ತು. ಕೆಲವು ಕಡೆ ಇದರಿಂದ ಗಲಾಟೆಗಳಂತಹ ಪ್ರಕರಣಗಳಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ತಿಳಿದು ಬಂದಿದೆ.