ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ, ಅಂಗನವಾಡಿ ಕೇಂದ್ರ ಹಾಗೂ ವಿದ್ಯಾರ್ಥಿ ನಿಲಯಕ್ಕೆ ಕೊಡುಗೆ

ಸುಳ್ಯ ಲಯನ್ಸ್ ಕ್ಲಬ್‌ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮವು ಸೆ.28 ರಂದು ನಡೆಯಿತು. ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ ರೈ ಯವರ ಅಧ್ಯಕ್ಷತೆಯಲ್ಲಿ ಸಮಾರಂಭವು ಸಂಜೆ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು. ಮುಖ್ಯ ಅಭ್ಯಾಗತರಾಗಿ ಪ್ರಾಂತೀಯ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಗಂಗಾಧ‌ರ್ ರೈ ಮತ್ತು ಲಯನ್ ವೇದಾವತಿ ರೈ ದಂಪತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಲಯ1 ರ ರೋನ್ ಎನ್ವಾಯಿ ಲಯನ್ ಅಮೃತಾ ಅಪ್ಪಣ್ಣ, ವಲಯಾಧ್ಯಕ್ಷೆ ಲಯನ್ ರೂಪಶ್ರೀ ಜೆ. ರೈ, ರಾಜ್ಯಪಾಲರ ಪ್ರಾಂತೀಯ ರಾಯಭಾರಿ ಅಂಬಾಸೆಡರ್ ಲಯನ್ ರೇಣುಕಾ ಸದಾನಂದ ಜಾಕೆ, ಬೆಳ್ಳಾರೆ ಲಯನ್ ಅಧ್ಯಕ್ಷೆ ಲಯನ್ ಉಷಾ ಭಟ್, ಗುತ್ತಿಗಾರು ಲಯನ್ಸ್ ಅಧ್ಯಕ್ಷ ಲಯನ್ ಕುಶಾಲಪ್ಪ ತುಂಬತ್ತಜೆ, ಕಡಬ ಲಯನ್ಸ್ ಕ್ಲಬ್ ಅಧ್ಯಕ್ಷೆ ಲಯನ್‌ ಫಿಲೋಮಿನಾ ಸ್ಕರಿಯ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಶಶಿಧರ ಪಳಂಗಾಯ, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ಲಯನ್ ಪಾರ್ವತಿ ಎಂ, ಐಪಿಪಿ ಲಯನ್‌ ವೀರಪ್ಪ ಗೌಡ ಕಲ್, ಕಾರ್ಯದರ್ಶಿ ಲಯನ್ ರಾಮಚಂದ್ರ ಪಲ್ಲತಡ್ಕ, ಕೋಶಾಧಿಕಾರಿ ಲಯನ್ ರಮೇಶ್ ಶೆಟ್ಟಿ ವೇದಿಕೆಯಲ್ಲಿದ್ದರು.

ಲಯನ್ ಜಾನ್ಸಿ ಕೆ.ಡಿ ಪ್ರಾರ್ಥಿಸಿದರು. ಲಯನ್ ಶೋಭಾ ರಾಮಚಂದ್ರ ಧ್ವಜ ವಂದನೆ ನಡೆಸಿಕೊಟ್ಟರು. ಲಯನ್ ಪದ್ಮ ರಂಗನಾಥ್ ನೀತಿ ಸಂಹಿತೆಯನ್ನು ಬೋಧಿಸಿದರು. ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಾಮಕೃಷ್ಣ ರೈ ಸ್ವಾಗತಿಸಿದರು. ಕಾರ್ಯದರ್ಶಿ ಲಯನ್ ರಾಮಚಂದ್ರ ಪಲ್ಲತಡ್ಕ ಸಂಕ್ಷಿಪ್ತ ವರದಿ ವಾಚಿಸಿದರು. ಲಯನ್ ಡಾ.ಲಕ್ಷ್ಮೀಶ್ ಪ್ರಾಂತೀಯ ಅಧ್ಯಕ್ಷರ ಪರಿಚಯ ಮಾಡಿದರು.

ಈ ಸಂದರ್ಭದಲ್ಲಿ ಸೆಪ್ಟಂಬರ್ ತಿಂಗಳ ಬುಲೆಟಿನ್ ಸಂಪಾದಕ ಲಯನ್ ಆನಂದ ಪೂಜಾರಿಯವರ ನೇತೃತ್ವದಲ್ಲಿ ಹೊರತಂದ ಸಿಂಹಾವಲೋಕನ ಸಂಚಿಕೆಯನ್ನು ಪ್ರಾಂತೀಯ ಅಧ್ಯಕ್ಷರು ಬಿಡುಗಡೆಗೊಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕೃಷ್ಣಾನಂದ ಶರಳಾಯ ದೊಡ್ಡರಿ, ಪದ್ಮನಾಭ ಅತ್ಯಾಡಿ, ರಘುರಾಮ ಬಿಜೂರು ರವರನ್ನು ಕ್ಲಬ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಬೆಟ್ಟಂಪಾಡಿ ಅಂಗನವಾಡಿ ಕೇಂದ್ರಕ್ಕೆ ಕ್ಲಬ್ ವತಿಯಿಂದ ಮಕ್ಕಳಿಗೆ ಕುಳಿತುಕೊಳ್ಳುವ ಆಸನದ ಹಾಗೂ ಕಪಾಟನ್ನು

ಕೊಡುಗೆಯಾಗಿ ನೀಡಲಾಯಿತು.

ಡಾ. ಬಿ. ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಸುಳ್ಯ ಪಯಸ್ವಿನಿ ಜೂನಿಯರ್ ಚೇಂಬರ್ ಟ್ರಸ್ಟಿಗೆ ೫೦೦೧/- ಚೆಕ್ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷ ಲಯನ್ ಗಂಗಾಧರ ರೈ ಮತ್ತು ಲಯನ್ ವೇದಾವತಿ ದಂಪತಿಯವರನ್ನು ಕ್ಲಬ್ ವತಿಯಿಂದ ಮಾಜಿ ಗವರ್ನರ್ ಲಯನ್ ಎಂ.ಬಿ.ಸದಾಶಿವ ರವರು ಸನ್ಮಾನಿಸಿದರು. ಲಯನ್ ಜಯರಾಮ ದೇರಪ್ಪಜ್ಜನಮನೆ ಯವರು ಕ್ಲಬ್ ವತಿಯಿಂದ ಹಮ್ಮಿಕೊಳ್ಳುವ ವಿದೇಶ ಪ್ರವಾಸದ ಕುರಿತು ಉಲ್ಲೇಖಿಸಿದರು. ಅಧ್ಯಕ್ಷ ಲಯನ್ ರಾಮಕೃಷ್ಣ ರೈ ಸ್ವಾಗತಿಸಿದರು.

ಖಜಾಂಜಿ ಲಯನ್ ರಮೇಶ್ ಶೆಟ್ಟಿ ವಂದಿಸಿದರು. 

ಪ್ರಾಂತೀಯ ಅಧ್ಯಕ್ಷ ಲಯನ್ ಗಂಗಾಧರ ರೈ ಮತ್ತು ಲಯನ್ ವೇದಾವತಿ ದಂಪತಿಯವರನ್ನು ಕ್ಲಬ್ ವತಿಯಿಂದ ಮಾಜಿ ಗವರ್ನರ್ ಲಯನ್ ಎಂ.ಬಿ.ಸದಾಶಿವ ರವರು ಸನ್ಮಾನಿಸಿದರು. ಲಯನ್ ಜಯರಾಮ ದೇರಪ್ಪಜ್ಜನಮನೆ ಯವರು ಕ್ಲಬ್ ವತಿಯಿಂದ ಹಮ್ಮಿಕೊಳ್ಳುವ ವಿದೇಶ ಪ್ರವಾಸದ ಕುರಿತು ಉಲ್ಲೇಖಿಸಿದರು. ಅಧ್ಯಕ್ಷ ಲಯನ್ ರಾಮಕೃಷ್ಣ ರೈ ಸ್ವಾಗತಿಸಿದರು.

ಖಜಾಂಜಿ ಲಯನ್ ರಮೇಶ್ ಶೆಟ್ಟಿ ವಂದಿಸಿದರು. ಲಯನ್ ಗೀತಾ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *