Advertisement
ಮಡಿಕೇರಿ ಜ.11 : ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಇದೀಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬ್ರದರ್ಸ್ ದೇವರಕೊಲ್ಲಿ ತಂಡಕ್ಕೆ, ಅಲ್ಲಿನ ಪಂಚಾಯಿತಿ ವತಿಯಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ನಂಜುಂಡ ಸ್ವಾಮಿ, ಪಂಚಾಯತ್ ಅಧ್ಯಕ್ಷರಾದ ರಾಮ್ಮಯ್ಯ, ಪಂಚಾಯತ್ ಸದಸ್ಯ ಸೈದಲವಿ, ಹಿರಿಯ ಕ್ರೀಡಾಪಟು, ಸಾಮಾಜಿಕ ಕಾರ್ಯಕರ್ತ ಮುಸ್ತಫ, ತಂಡದ ತರಬೇತುದಾರ ಸಮೀರ್ ಹಾಗೂ ತಂಡದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Advertisement