ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ SSF ಬೃಹತ್ತಾದ ಕಾರ್ಯ ವೈಖರಿಯನ್ನು ನಡೆಸುತ್ತಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಕಲೆಗಳನ್ನು ಸಾಹಿತ್ಯೋತ್ಸವದ ಮೂಲಕ ಹೊರ ತಂದು ಹಲವಾರು ಪ್ರತಿಭೆಗಳಾಗಿ ಸಮಾಜಕ್ಕೆ ಹೊರಹೊಮ್ಮುತ್ತಿದ್ದಾರೆ. ನವ ಪ್ರತಿಭೆಗಳಿಗಾಗಿ ಸುಳ್ಯ ಸೆಕ್ಟರ್ ಸಾಹಿತ್ಯೊತ್ಸವವು ಐದು ಶಾಖೆಗಳಾಗಿ 300ಕ್ಕೂ ಮಿಕ್ಕ ವಿದ್ಯಾರ್ಥಿ ಪ್ರತಿಭೆಗಳು ಅಕ್ಟೋಬರ್ 20 ರಂದು ತೆಕ್ಕಿಲ್ ಆಡಿಟೋರಿಯಂ ನಲ್ಲಿ ಒಂದುಗೂಡಲಿದ್ದಾರೆ. ವಿದ್ಯಾರ್ಥಿ ಪ್ರತಿಭೆಗಳಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು ಹೊರತಂದು ಅವರ ಭವಿಷ್ಯವನ್ನು ಬೆಳಗಿಸಲು ಎಸ್ಸೆಸ್ಸೆಫ್ ಕಳೆದ ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ವಿದ್ಯಾರ್ಥಿ ಪ್ರತಿಭಾ ಹಬ್ಬವಾಗಿದೆ ಸಾಹಿತ್ಯೋತ್ಸವ. ಭಾಷಣ ಬರಹ ಹಾಗೂ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿರುವ ಪ್ರತಿಭಾನ್ವಿತರು ನಮ್ಮಲ್ಲಿ ಬಹಳಷ್ಟಿದ್ದಾರೆ ಅವರನ್ನು ಸಮಾಜಕ್ಕೆ ಪರಿಚಯಿಸಿ ಅವರನ್ನು ಸಾಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಜವಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ಪ್ರತಿಭೋತ್ಸವದ ಮೂಲಕ ಬಹಳಷ್ಟು ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಸಮರ್ಪಿಸಿದೆ. ಕಾರ್ಯಕ್ರಮದ ಸ್ವಾಗತ ಸಮಿತಿ ಚೆರ್ಯಮ್ಯಾನಾಗಿ ಬಶೀರ್ ಕಲ್ಲುಮುಟ್ಲು, ಕನ್ವೀನರಾಗಿ ಅಝೀಝ್ ಏಣಾವರ ಹಾಗೂ ಫಿನಾನ್ಸ್ ಕಾರ್ಯದರ್ಶಿ ರುನೈಝ್ ಕೊಯನಾಡು ರವರು ವಹಿಸಿಕೊಂಡಿದ್ದಾರೆ.
SSF ಸಾಹಿತ್ಯೋತ್ಸವ ಸಮಕಾಲೀನ ವೇದಿಕೆಗಳಲ್ಲಿ ಪ್ರಖ್ಯಾತ ವಾಗ್ಮಿಗಳನ್ನು, ಗಾಯಕರನ್ನು, ಕವಿಗಳನ್ನು, ಸಮಾಜ ಸೇವಕರನ್ನು, ನಾಯಕರನ್ನು, ಹೊರತರುವಲ್ಲಿ ಯಶಸ್ಸು ತನ್ನದಾಗಿಸಿಕೊಂಡಿದೆ. ಸಾಹಿತ್ಯೋತ್ಸವ ವೇದಿಕೆಗಳು ಸಮಾಜಸೇವಕರಾದ ನಿಪುಣ ಪ್ರತಿಭಾನ್ವಿತ ಪ್ರತಿಭೆಗಳ ಸೃಷ್ಟಿಯೇ SSF ಸಾಹಿತ್ಯೋತ್ಸವದ ಪ್ರಧಾನ ಗುರಿ. ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾರ ಸಹಾಯ ನಿರೀಕ್ಷೆಯಿಂದ ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ಸಮಿತಿ.