ಉದ್ಯೋಗಾಸಕ್ತ ಅಭ್ಯರ್ಥಿಗಳಿಗೆ ಸುವರ್ಣವಕಾಶ


ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಅಕ್ಟೋಬರ್ 22 ಮಂಗಳವಾರದಂದು ಎನ್ನೆಂಸಿ (ಕೆವಿಜಿ ಕ್ಯಾಂಪಸ್)ಯಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಹೀಗೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಕ್ಯಾಂಪಸ್ ನೇಮಕಾತಿ ಬೆಳಗ್ಗೆ ಸರಿಯಾಗಿ 9.30 ಗಂಟೆಗೆ ಆರಂಭಗೊಳ್ಳಲಿದ್ದು, ವಿವಿಧ ಗಣ್ಯರ ಸಮ್ಮುಖದಲ್ಲಿ ಮಂಗಳೂರು ಎನ್.ಐ.ಐ.ಟಿ ವೃತ್ತಿ ತರಬೇತಿ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಪವಿತ್ರಾ ವಿಕಾಸ್ ಉದ್ಘಾಟಿಸಲಿದ್ದಾರೆ. ಯಾವುದೇ ಕಾಲೇಜಿನ ಅಂತಿಮ ಪದವಿ ಓದುತ್ತಿರುವ ಅಥವಾ ಪದವಿ ಪೂರೈಸಿದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಪ್ರತಿಷ್ಠಿತ ಬ್ಯಾಂಕಿಂಗ್ ಸಂಸ್ಥೆಗಳು ಭಾಗವಿಸುವ ನಿರೀಕ್ಷೆಯಿದೆ. ಸುಳ್ಯ, ಪುತ್ತೂರು, ಮಡಿಕೇರಿ ತಾಲೂಕುಗಳು ಹಾಗೂ ಸಮೀಪದ ಇನ್ನಿತರ ಗ್ರಾಮೀಣ ಭಾಗಗಳ ಆಕಾಂಕ್ಷಿತರಿಗೆ ಈ ಬಾರಿಯ ಉದ್ಯೋಗ ಮೇಳವೂ ಅತ್ಯಂತ ಪ್ರಯೋಜನಕಾರಿ ಆಗಲಿದ್ದು ಅತ್ಯಂತ ಹೆಚ್ಚು ಸಂಖ್ಯೆಯ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಆಸಕ್ತರು ನೋಂದಾಯಿಸಿಕೊಳ್ಳಲು

  1. https://forms.gle/SBDudQhkm3HEtGtF9
  2. https://forms.gle/tkZX1tzcCoG6dMRHA
  3. https://forms.gle/aLgeTSm3bSzYK86f7
  4. https://forms.gle/rTFSyx13eGEzdWy5A
    ಈ ಲಿಂಕ್ ಗಳನ್ನು ಬಳಸಬಹುದು. ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನೆಹರೂ ಮೆಮೋರಿಯಲ್ ಕಾಲೇಜಿನ ಕಚೇರಿ (08257230331, 08257233331) ಸಂಖ್ಯೆಗಳನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *