ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ (Gange Baare Thunge Baare) ಸಿನಿಮಾದ ನಾಯಕಿ ಸುನೈನಾ (Sunaina) ಇದೀಗ ಖಾಸಗಿ ಬದುಕಿನ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ದುಬೈ ಮೂಲದ ಯೂಟ್ಯೂಬರ್ ಖಲೀದ್ (Khalid Al Ameri) ಜೊತೆ ಸುನೈನಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಖಲೀದ್ ಅಲ್ ಅಮೇರಿ (Khalid Al Ameri) ಜೊತೆ ಜುಲೈ 1ರಂದು ಸುನೈನಾ ನಿಶ್ಚಿತಾರ್ಥ ನೆರವೇರಿದೆ ಎನ್ನಲಾಗಿದೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೊದಲ ಪತ್ನಿ ಸಲಾಮಾ ಜೊತೆ ಡಿವೋರ್ಸ್ ಆಗಿರೋದಾಗಿ ಖಲೀದ್ ಇತ್ತೀಚೆಗೆ ರಿವೀಲ್ ಮಾಡಿದ್ದರು. ಈ ಬೆನ್ನಲ್ಲೇ ಖಲೀದ್ 2ನೇ ಮದುವೆ ಬಗ್ಗೆ ವಿಚಾರ ಹರಿದಾಡುತ್ತಿದೆ. ಇನ್ನೂ ಕಳೆದ ಜೂನ್‌ನಲ್ಲಿ ನಟಿ ಸುನೈನಾ ಪೋಸ್ಟ್ ಒಂದನ್ನು ಮಾಡಿದ್ದರು. ನಟಿ ಪುರುಷನೊಬ್ಬನ ಕೈ ಹಿಡಿದಿದ್ದಾರೆ. ಈ ಫೋಟೋಗೆ ಬೀಗದ ಚಿತ್ರದ ಎಮೋಜಿ ಹಾಕಿದ್ದರು. ಎಂಗೇಜ್ ಆಗಿರೋದಾಗಿ ನಟಿ ಪರೋಕ್ಷವಾಗಿ ತಿಳಿಸಿದ್ದರು. ನಟಿಯ ಪೋಸ್ಟ್‌ಗೆ ಖಲೀದ್ ಅವರು ಲೈಕ್ ಮಾಡಿದ್ದರು. ಈಗ ಖಲೀದ್ ಕೂಡ ಇದೇ ರೀತಿಯ ಫೋಟೋ ಹಾಕಿದ್ದಾರೆ. ಈ ಮೂಲಕ ಇಬ್ಬರ ನಿಶ್ಚಿತಾರ್ಥ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ನಟಿ ಸ್ಪಷ್ಟನೆ ಕೊಡ್ತಾರಾ ಕಾಯಬೇಕಿದೆ. ಅಂದಹಾಗೆ, ಪ್ರಜ್ವಲ್ ದೇವರಾಜ್ ಜೊತೆ ‘ಗಂಗೆ ಬಾರೆ ತುಂಗೆ ಬಾರೆ’ (Gange Baare Thunge Baare) ಸಿನಿಮಾ ಬಳಿಕ ಸೌತ್‌ನಲ್ಲಿ ನಟಿ ಬ್ಯುಸಿಯಾದರು. ರೆಜಿನಾ, ಲಾಠಿ, ಟ್ರಿಪ್, ಕಾಳಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.