7ನೇ ವೇತನ ಆಯೋಗದ ಶಿಫಾರಸ್ಸಿನನ್ವಯ ಸರಕಾರಿ ನೌಕರರಿಗೆ ಹೆಚ್ಚಳವಾದ ವೇತನದಲ್ಲಿ ಪ್ರಥಮ ತಿಂಗಳಿನ ಸಂಪೂರ್ಣ ಮೊತ್ತವನ್ನು ಶ್ರೀ ಶಿವಪ್ರಸಾದ್ ಕೆ.ವಿ. ತನ್ನ ಹುಟ್ಟೂರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ಇವರ ವತಿಯಿಂದ ಸೇವೆ ನೀಡುತ್ತಿರುವ ಆಂಬುಲೆನ್ಸ್ ಮತ್ತು ಇತರ ಸೇವಾ ಯೋಜನೆಗಳಿಗೆ ಹಸ್ತಾಂತರ ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಕಡೋಡಿ, ಬಿ.ಇ.ಒ.ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀ ಕಿಶೋರ್ ಕುಮಾರ್ ಯು.ವಿ. ಅಧೀಕ್ಷಕರಾದ ಶಿವಪ್ರಸಾದ್ ಜಿ.ಎಸ್., ಕಛೇರಿ ಸಿಬ್ಬಂದಿಗಳಾದ ಶ್ರೀ ರತ್ನಾಕರ ಕೆ, ಸನತ್ ಪಿ.ಎನ್.,ಪೃಥ್ವಿಕುಮಾರ್.ಟಿ.,ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸುಧಾಕರ ರೈ, ಉಪ ಸಭಾಪತಿ ಮುಸ್ತಾಫಾ, ಕಾರ್ಯದರ್ಶಿ ತಿಪ್ಪೇಶಪ್ಪ ಹೆಚ್.ಟಿ. ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿಯರು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.