Nammasullia: ಹಲವಾರು ವರ್ಷಗಳಿಂದ ಸ್ಥಳೀಯರ ಅಚ್ಚುಮೆಚ್ಚಿನ ಹೋಟೆಲ್ ಆಗಿರುವ ಕಲ್ಲಡ್ಕದ ಸುಪ್ರಸಿದ್ಧ ಶ್ರೀ ಲಕ್ಷ್ಮೀನಿವಾಸ್ ಕೆಟಿನಲ್ಲಿ ಕಳ್ಳತನ ನಡೆದಿದ್ದು, ಕಳ್ಳನ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕಳ್ಳ ಹೋಟೆಲ್‌ಗೆ ನುಗ್ಗಿ ದೇವರಿಗೆ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಕದ್ದಿದ್ದಾನೆ ಎಂದು ವರದಿಯಾಗಿದೆ. ಪೊಲೀಸರು ಕಳ್ಳತನ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ಹೋಟೆಲ್ ಮಾಲೀಕರು ಔಪಚಾರಿಕವಾಗಿ ದೂರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ.

ಕಾಣಿಕೆ ಡಬ್ಬಿಯಲ್ಲಿದ್ದ ಚಿಲ್ಲರೆ ಹಣವನ್ನು ಕದ್ದ ಕಳ್ಳ, ಹೊಟೇಲ್‌ನ ಇತರೆ ಪ್ರದೇಶಗಳಲ್ಲೂ ತಿರುಗಾಡುತ್ತಿರುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಅ.25ರ ಮುಂಜಾನೆ 2 ಗಂಟೆ ಸುಮಾರಿಗೆ, ಹೆಲ್ಮೆಟ್ ಧರಿಸಿದ ಕಳ್ಳನೊಬ್ಬ ಟಾರ್ಚ್ ಲೈಟ್ ಹಿಡಿದು ಹೋಟೆಲ್‌ಗೆ ನುಗ್ಗಿದ್ದಾನೆ. ಕಳ್ಳನು ಹೋಟೆಲ್‌ನಲ್ಲಿ ಸುಮಾರು 7 ನಿಮಿಷಗಳ ಕಾಲ ಆರಾಮವಾಗಿ ತಿರುಗಾಡುತ್ತಿರುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ.
ಬಂಟ್ವಾಳ ನಗರ ಪೊಲೀಸರು ಸಿಸಿಟಿವಿ ದೃಶ್ಯವನ್ನು ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಈತನ್ಮಧ್ಯೆ, ಕಳ್ಳನ ಚಿತ್ರಗಳು ಮತ್ತು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.