Namma sullia ಸುಳ್ಯದ ಪ್ರಮುಖ ಜಂಕ್ಷನ್ ಗಳಲ್ಲಿ‌ ಒಂದಾಗಿರುವ  ಪೈಚಾರ್’ನಲ್ಲಿ ಅ.28 ರಂದು ಝಡ್- ಮಿನಿ ಮಾರ್ಟ್, ಸೂಪರ್ ಮಾರ್ಕೆಟ್ ಶುಭಾರಂಭಗೊಂಡಿತು.

ಹಿರಿಯ ವ್ಯಾಪಾರಸ್ಥರಾದ ಇಬ್ರಾಹಿಂ ಪಿ.ಕೆ ಮಾರ್ಟ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬದ್ರಿಯಾ ಮಸೀದಿ ಪೈಚಾರು ಇದರ ಅಧ್ಯಕ್ಷ ಇಬ್ರಾಹಿಂ, ಮಾಜಿ ತಾ.ಪಂ ಸದಸ್ಯ ಗೋಪಿನಾಥ ಬೊಳುಬೈಲು, ಜಾಲ್ಸೂರು ಗ್ರಾ.ಪಂ ಸದಸ್ಯ ಮಜೀದ್‌ ಪೈಚಾರು, ಗ್ರಾ.ಪಂ ಮಾಜಿ ಸದಸ್ಯ ಭುವನೇಂದ್ರ, ಮಾಜಿ ಸದಸ್ಯ ಪ್ರವೀಣ್, ಪಿ.ಯಂ ಕಾಂಪ್ಲೆಕ್ಸ್ ಮಾಲಕ ಮಧುಸೂದನ, ಜಯರಾಮ ದೇರಪಜ್ಜನ ಮನೆ, ಕರ್ನಾಟಕ ರಬ್ಬರ ಮಾರ್ಕೆಟಿಂಗ್ ಪೈಚಾರ್ ಇದರ ಮಾಲಕ ಸಂಶುದ್ದೀನ್, ಇಂಡಿಯನ್‌ ರಬ್ಬರ್ ಏಜೆನ್ಸಿಯ ಮಾಲಕ ಫಾರೂಕ್, ಪೀಸ್ ಸ್ಕೂಲ್ ನ ಸ್ಥಾಪಕಾಧ್ಯಕ್ಷ ಅಬೂಬಕ‌ರ್ ಹೀಗೆ ಹಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಆರ್.ಬಿ.ಬಶೀರ್ ಪೈಚಾರು ಕಾರ್ಯಕ್ರಮ ನಿರೂಪಿಸಿದರು.

ಝೆಡ್ ಮಾರ್ಟ್ ಬೆಳಗ್ಗೆ 8.30 ರಿಂದ ರಾತ್ರಿ 9.00ರ ತನಕ ತೆರದಿರುವುದು. ಹಾಗೂ ನಮ್ಮ ಗ್ರಾಹಕರಿಗೆ 2ಕಿ.ಮಿ. ವ್ಯಾಪ್ತಿಯೊಳಗೆ ಉಚಿತ ಹೋಂ ಡೆಲಿವರಿ ಸೌಲಭ್ಯ ಇರುವುದಾಗಿ ಮಾರ್ಟ್’ನ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *