ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಾರ್ದಿಕ್ ಪಾಂಡ್ಯ(222 ರೇಟಿಂಗ್ ಅಂಕ) ಅವರು ನೂತನ ಐಸಿಸಿ ಟಿ20 ಆಲ್ರೌಂಡರ್ ಶ್ರೇಯಾಂಕದಲ್ಲಿ(T20I all-rounder) ಅಗ್ರಸ್ಥಾನಕ್ಕೇರಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಂಡ್ಯ(Hardik Pandya) ಒಟ್ಟು 144 ರನ್ ಮತ್ತು 11 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಅದರಲ್ಲೂ ಫೈನಲ್ನಲ್ಲಿ ಸೋಲಿನ ಭೀತಿಯಲ್ಲಿದ್ದ ಭಾರತಕ್ಕೆ ಅಪಾಯಕಾರಿ ಕ್ಲಾಸೆನ್ ಮತ್ತು ಮಿಲ್ಲರ್ ವಿಕೆಟ್ ಭೇಟೆಯಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಎಲ್ಲ ಪ್ರದರ್ಶನದ ಫಲವಾಗಿ ಅವರು ಆಲ್ರೌಂಡರ್ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದರು. ಲಂಕಾದ ವನಿಂದು ಹಸರಂಗ ಕೂಡ 222 ರೇಟಿಂಗ್ ಅಂಕದೊಂದಿಗೆ ಅಗ್ರಸ್ಥಾನ ಪಡೆದರು. ಬ್ಯಾಟಿಂಗ್ ಶ್ರೇಯಾಂಕದಲ್ಲಿ ಯಾವುದೇ ಮಹತ್ವದ ಬದಲಾವಣೆ ಸಂಭವಿಸಿಲ್ಲ. ಈ ಹಿಂದೆ ಇದ್ದಂತೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನ, ಸೂರ್ಯಕುಮಾರ್ ಯಾದವ್ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಆದರೆ ಬೌಲಿಂಗ್ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾದ ಅನ್ರಿಚ್ ನೋರ್ಜೆ ಬರೋಬ್ಬರಿ 7 ಸ್ಥಾನಗಳ ಪ್ರಗತಿ ಸಾಧಿಸಿ 2ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ಸ್ಪಿನ್ನರ್ ಆದೀಲ್ ರಶೀದ್ ಮೊದಲ ಸ್ಥಾನಿಯಾಗಿದ್ದಾರೆ. ಭಾರತೀಯ ಬೌಲರ್ಗಳಾದ ಅಕ್ಷರ್ ಪಟೇಲ್ 7ನೇ, ಕುಲ್ದೀಪ್ ಯಾದವ್ 8ನೇ ಸ್ಥಾನ ಪಡೆದಿದ್ದಾರೆ.

ಟಾಪ್​-5 ಆಲ್​ರೌಂಡರ್​ಗಳು


1. ಹಾರ್ದಿಕ್​ ಪಾಂಡ್ಯ- 222 ರೇಟಿಂಗ್​ ಅಂಕ

2. ವನಿಂದು ಹಸರಂಗ-222 ರೇಟಿಂಗ್​ ಅಂಕ

3. ಮಾರ್ಕಸ್​ ಸ್ಟೋಯಿನಿಸ್​-211 ರೇಟಿಂಗ್​ ಅಂಕ

4. ಸಿಕಂದರ್​ ರಾಜಾ-210 ರೇಟಿಂಗ್​ ಅಂಕ

5. ಶಕೀಬ್ ಅಲ್ ಹಸನ್-206 ರೇಟಿಂಗ್ ಅಂಕ

ಟಿ20 ವಿಶ್ವಕಪ್​ ಟೂರ್ನಿ ಆರಂಭಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ, ಜತೆಗೆ ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನತಾಶಾಗೆ ವರ್ಗಾಯಿಸಬೇಕಿದೆ ಎನ್ನಲಾಗಿತ್ತು. ಈ ಎಲ್ಲ ಮಾತುಗಳ ಮಧ್ಯೆಯೂ ಪಾಂಡ್ಯ ದೇಶದ ಕರ್ತವ್ಯಕ್ಕೆ ಹಾಜರಾಗಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *