ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಟ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ರೋಚಕವಾಗಿ ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತು. ಇಂದು ಚಾಂಪಿಯನ್ ತಂಡ ಭಾರತ ರೋಡ್ ಶೋ ನಡೆಸುವ ಸಂಧರ್ಭ ಭಾರತ ಕ್ರಿಕೆಟ್ ತಂಡದ ಅಪ್ಪಟ ಫ್ಯಾನ್ ಬೆಂಗಳೂರು ಮೂಲದ ಅನಿಲ್ ಎಂಬುವವರು, ಗ್ರಾಹಕರಿಗೆ ಮಾಸಾಲ ಪೂರಿ,ಪಾನಿಪೂರಿ, ಉಚಿತವಾಗಿ ನೀಡಿ ಸೈ ಎನಿಸಿಕೊಂಡಿದ್ದಾರೆ.
ಬೆಂಗಳೂರಿನ ಅನಿಲ್ ಚಾಟ್ ಸೆಂಟರ್ ನಲ್ಲಿ, ಈ ದಿನ (ಜುಲೈ_4) ರಂದು ಉಚಿತವಾಗಿ ಮಸಾಲ ಪೂರಿ, ಪಾನಿ ಪೂರಿ ವಿತರಿಸಿ ಭಾರತದ ಕಪ್ ಗೆದ್ದ ಖುಷಿಯನ್ನು ಮಾಲಕ ಅನಿಲ್ ರವರು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.
ವರದಿ: ರಝಾಕ್ ಸಿ.ಕೆ