ಸುಳ್ಯ: ಮಳೆ ಅಬ್ಬರ ಎಲ್ಲಾ ಕಡೆ ಜೋರಾಗಿದ್ದು, ಹಲವು ಕಡೆ ಅನಾಹುತಗಳು ಮರುಕಳಿಸುತ್ತಿವೆ,
ಈ ಹಿನ್ನಲೆಯಲ್ಲಿ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಡಿಕಾನ ದೇವರ ಗುಂಡಿ ಜಲಪಾತಕ್ಕೆ ಮಳೆಗಾಲದಲ್ಲಿ ಪ್ರವಾಸಿಗರು ತೆರಳದಂತೆ, ದ. ಕ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಂಜಾಗೃತಾ ಕ್ರಮವಹಿಸಿ ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ನಿಷೇಧಾಜ್ಞೆ ಸೂಚನಾ ಫಲಕವನ್ನು ಅಳವಡಿಸಲಾಯಿತು.