ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ರಕ್ತ ದಾನ ಎಂಬ ಮಾತಿದೆ. ಹೀಗೆ ತುರ್ತು ರಕ್ತದ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಸುಳ್ಯದ ಇಬ್ಬರು ಯುವಕರು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.
ಸುಳ್ಯ ಮಂಡೆಕೋಲು ನಿವಾಸಿ, ಕೆವಿಜಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಂದ್ರವತಿ ಎಂಬುವವರಿಗೆ ರಕ್ತದ ಅವಶ್ಯಕತೆ ಇತ್ತು, ಈ ಸಂಧರ್ಭದಲ್ಲಿ ಸುಳ್ಯದ ಪೈಚಾರ್ ಮೂಲದ ಹರ್ಷಾದ್ ಹಾಗೂ ಕೋಲ್ಚಾರ್ ಮೂಲದ ಸುಜಿತ್, ಸಿದ್ದೀಕ್ ನಾವೂರು ಎಂಬುವವರು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.