ಸಿಂಗಾಪುರ್: 29 ನವಂಬರ್ 2024 ಸಿಂಗಾಪುರದಲ್ಲಿ ನಡೆದ 16 ನೇಯ ಅಂತರಾಷ್ಟ್ರೀಯ ‘ASIA PACIFIC SHITORYU KARATEDO CHAMPIONSHIPS’ ನಲ್ಲಿ KUMITE ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ KVG IPS ಹತ್ತನೇ ತರಗತಿಯ ವಿದ್ಯಾರ್ಥಿ ವರ್ಷಿತ್ ಎಂ.ಎನ್.
ನವೆಂಬರ್ 27 ರಿಂದ ಡಿಸೆಂಬರ್ 2 ರತನಕ ನಡೆಯುತ್ತಿರುವ 16 ನೇಯ ಅಂತರಾಷ್ಟ್ರೀಯ ‘ASIA PACIFIC SHITORYU KARATEDO CHAMPIONSHIPS, ಶಿತೋರಿಯು ಕರಾಟೆ ಅಸೋಸಿಯೇಷನ್ ಡಿ&ಡಿ ಇದರ ಅರುವತ್ತನೆ ವಾರ್ಷಿಕೋತ್ಸವದ ಸಲುವಾಗಿ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಸುಳ್ಯದ ಕುವರ ಮೇಲುಗೈ ಸಾಧಿಸಿದ್ದಾನೆ.
ಇವರು ಸುಳ್ಯದ ಮಂಡೆಕೋಲು ವಸಂತ್ ಕುಮಾರ್ ಮೀನಗದ್ದೆ ಮತ್ತು ಜಯಶ್ರೀ ದಂಪತಿಗಳ ಪುತ್ರ.
ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಶಸ್ತಿಗಳನ್ನು ಪಡೆದು ಸುಳ್ಯದ ಹಿರಿಮೆ ವಿಶ್ವ ಭೂಪಟದಲ್ಲಿ ಮಿಂಚುವಂತಾಗಲಿ.