ಸುಳ್ಯ:ಇಲ್ಲಿನ ಜಯನಗರ ಎಂಬಲ್ಲಿ ಗಾಂಜ ಸೇವನೆ ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಿನ್ನೆ ವರದಿಯಾಗಿದೆ.
ಜಯನಗರದ ಅಝರ್, ರಿಯಾಝ್, ಮಹಮ್ಮದ್ ಜಾಯಿದ್ ಹಾಗೂ ಇನ್ನೊಬ್ಬ ಗಾಂಜಾ ಮಾರಾಟದ ಕೃತ್ಯದಲ್ಲಿ ತೊಡಗಿಕೊಂಡಿದ್ದು, ಮಹಮ್ಮದ್ ಜಾಯಿದ್ ಎಂಬಾತನ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ.
ಆರೋಪಿತರು ಗಾಂಜಾ ಸೇವನೆಯ ತಪಾಸಣೆಯ ವೇಳೆ ಜಾಯಿದ್ ನ ಮನೆಯಲ್ಲಿ ಗಾಂಜಾ ಇರುವ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದನೆನ್ನಲಾಗಿದೆ.
ಮಹಮ್ಮದ್ ಜಾಯಿರ ಮನೆಯ ಮೇಲ್ಬಾವಣಿಯಲ್ಲಿ ಗಾಂಜಾವನ್ನು ಅಲ್ಲಿ ಬಚ್ಚಿಟ್ಟಿದ್ದನೆನ್ನಲಾಗಿದೆ. ಅಂದಾಜು ೧೫೦ ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ವರದಿ ಬಂದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.