ನಟ ಮಾಧವನ್ (Actor Madhavan) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ತಮ್ಮ ಸಿನಿಮಾಗಿಂತ ಇತರೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಫ್ರೆಂಚ್ ಪ್ರೆಸಿಡೆಂಟ್ (French President) ಇಮ್ಯಾನುಯೆಲ್-ಮ್ಯಾಕ್ರಾನ್ ಜೊತೆ ಊಟ ಸವಿದಿದ್ದಾರೆ. ಅವರ ಜೊತೆ ಕಳೆದಂತಹ ಸುಂದರ ಕ್ಷಣಗಳನ್ನ ನಟ ಮ್ಯಾಡಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ತಮಿಳು, ಬಾಲಿವುಡ್ ರಂಗದಲ್ಲಿ ಗುರುತಿಸಿಕೊಂಡಿರುವ ಹೆಸರಾಂತ ನಟ ಮಾಧವನ್ ಅವರು 1998ರಲ್ಲಿ ಕನ್ನಡದ ʼಶಾಂತಿ ಶಾಂತಿ ಶಾಂತಿʼ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಹಿಂದಿ, ತಮಿಳು ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆರ್. ಮಾಧವನ್ ಅವರು ಫ್ರೆಂಚ್ ಪ್ರೆಸಿಡೆಂಟ್ ಇಮ್ಯಾನುಯೆಲ್-ಮ್ಯಾಕ್ರಾನ್ ಅವರು ಆಯೋಜಿಸಿದ ಡಿನ್ನರ್‌ನಲ್ಲಿ ಭಾಗಿಯಾದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವಾರ್ಥವಾಗಿ ಲೌರೆ ಮ್ಯೂಸಿಯಂನಲ್ಲಿ ಆಯೋಜಿಸಿದ್ದ ಡಿನ್ನರ್‌ನಲ್ಲಿ ಮೋದಿ ಜೊತೆ ಮಾಧವನ್ ಕೂಡಾ ಭಾಗಿಯಾಗಿದ್ದರು. ಮಾಧವನ್ ಅವರು ಮೋದಿಯವರ ಕೈ ಹಿಡಿದು ಆಪ್ತತೆಯಿಂದ ಮಾತನಾಡುತ್ತಿರುವುದು ಫೋಟೋದಲ್ಲಿ ನೋಡಬಹುದಾಗಿದೆ. ಈ ಪೋಸ್ಟ್‌ಗೆ ಶಿಲ್ಪಾ ಶೆಟ್ಟಿ( Shilpa Shetty), ಅನುಪಮ್ ಖೇರ್ ಸೇರಿದಂತೆ ಹಲವು ಮೆಚ್ಚುಗೆ ಸೂಚಿಸಿದ್ದಾರೆ. ನಟ ಮಾಧವನ್ ಸಿನಿಮಾಗಳಲ್ಲಿ ಮಿಂಚುತ್ತಿದ್ದರೆ. ಅವರ ಮಗ ವೇದಾಂತ್ ಕ್ರೀಡೆಯಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಈಜು ಕ್ರೀಡೆಯಲ್ಲಿ ಈಗಾಗಲೇ ವೇದಾಂತ್ ಮಾಧವನ್ ಹಲವು ಬಾರಿ ಪದಕಗಳನ್ನು ಗೆದ್ದಿದ್ದಾರೆ. 17ನೇ ವಯಸ್ಸಿನಲ್ಲಿ, ಅವರು ಈಜು ಸ್ಪರ್ಧೆಗಳಲ್ಲಿ ಅನೇಕ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಜೊತೆಗೆ ಭಾರತದ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.
Advertisement
Advertisement