ಸುಳ್ಯ:- ಹಿರಿಯರೂ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಂತಹ ಅರಂತೋಡು ಜುಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರೂ ಆದ ಹಾಜಿ ಅಹಮ್ಮದ್ ಕುಂಞಿ ಪಟೇಲ್ ರವರು ನಿಧನ ಹೊಂದಿದರು. ಇವರ ನಿಧನಕ್ಕೆ (SDPI) ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ.
ಮೃತರ ಪಾರತ್ರಿಕ ಜೀವನವನ್ನು ಸೃಷ್ಟಿಕರ್ತನು ಯಶಸ್ಸುಗೊಳಿಸಲಿ.
ಕುಟುಂಬಕ್ಕೆ ಮತ್ತು ಬಂಧು ಬಳಗಕ್ಕೆ ಇವರ ಆಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದು SDPI ಸುಳ್ಯ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಮೀರಾಜ್ ಸುಳ್ಯರವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.