ಮಾಣಿ: ಹಿರೊ ಸ್ಪ್ಲೆಂಡರ್ ಬೈಕ್ ಹಾಗೂ ಟಾಟಾ ಟೆಂಪೋ ನಡುವೆ ಅಪಘಾತ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಸೂರಿಕುಮೇರ್’ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಸುಳ್ಯ ನಿವಾಸಿ, ಸೂರಿಕುಮೇರು ಸಮೀಪದ ಕೋಸ್ಕಲ್ ಕೋಳಿ ಫಾರ್ಮ್ ಕೆಲಸಗಾರ ಪುನೀತ್ ಮೃತಪಟ್ಟ ಬೈಕ್ ಸವಾರ, ಕಂಪೆನಿಯಲ್ಲಿ ಕೆಲಸ ಮುಗಿಸಿ ಸುಳ್ಯದ ತನ್ನ ಮನೆಗೆ ಹಿಂತಿರುಗುತ್ತಿರುವ ವೇಳೆ ಅಪಘಾತ ನಡೆದಿದೆ. ಸೂರಿಕುಮೇರು ಜಂಕ್ಷನ್ ನಲ್ಲಿ ಬೈಕ್ ಹಾಗೂ ಟೆಂಪೊ ಪರಸ್ಪರ ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಸವಾರ ರಸ್ತೆಗೆ ಉರುಳಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುವನ್ನು ಮಾಣಿಯ ಸೋಷಿಯಲ್ ಇಕ್ಷ್ಯ ಅಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಯತ್ನ ನಡೆಸಲಾಗಿದೆ. ಆದರೆ ದಾರಿ ಮದ್ಯ ಮೃತಪಟ್ಟರೆನ್ನಲಾಗಿದೆ