ಬದಲಾಗುತ್ತಿರುವ ತಾಂತ್ರಿಕ ಜಗತ್ತಿಗೆ ನಾವೂ ತೆರೆದುಕೊಳ್ಳಬೇಕು – ಡಾ.ಉಜ್ವಲ್ ಯು.ಜೆ

ಶಿಕ್ಷಣವೆಂದರೆ ಸಮ್ರದ್ಧಿಕಾಲದ ಆಭರಣ, ಆಪತ್ಕಾಲದ ಆಶ್ರಯತಾಣ – ಡಾ. ಯಶೋದಾ ರಾಮಚಂದ್ರ.

ಕುರುಂಜಿ ವೆಂಕಟರಮಣ ಗೌಡ ಪಾಲಿಟೆಕ್ನಿಕ್ ನ 2024- 25 ನೇ ಸಾಲಿನ ಡಿಪ್ಲೋಮ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕೆವಿಜಿ ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ನಾವೂ ಅದಕ್ಕೆ ತೆರೆದುಕೊಳ್ಳಬೇಕು ಎಂದರಲ್ಲದೇ ನೂತನ ಶಿಕ್ಷಣ ನೀತಿಯ ಬಗ್ಗೆ ಸಂಪೂರ್ಣ ವಿವರ ನೀಡಿದರು.


ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಅಮರ ಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧಾ ರಾಮಚಂದ್ರ ಮಾತನಾಡಿ “ಶಿಕ್ಷಣವೆಂದರೆ ಸಮೃದ್ಧಿ ಕಾಲದ ಆಭರಣ_ ಕಷ್ಟಕಾಲದ ಆಶ್ರಯ ತಾಣ’ ಎಲ್ಲಾ ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಮುನ್ನಡೆದು ಯಶಸ್ಸು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ .ಕೆ ಕಾಲೇಜಿನ ನೀತಿ,ನಿಯಮ ಶಿಸ್ತು ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮನವರಿಕೆ ಮಾಡಿದರು. ಕಾಲೇಜಿನ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ ಸ್ವಾಗತಿಸಿ, ಸಿವಿಲ್ ವಿಭಾಗದ ಉಪನ್ಯಾಸಕ ಸುನಿಲ್ ಕುಮಾರ್ ಎನ್. ಪಿ ವಂದಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ರಂಗಸ್ವಾಮಿ ಸಂದೇಶ ವಾಚನ ಮಾಡಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *