ಎಸ್ಸೆಸ್ಸೆಫ್ ಕಲ್ಲುಗುಂಡಿ ಯುನಿಟ್ ವಾರ್ಷಿಕ ಮಹಾಸಭೆಯು ಆಶಿಕ್ ಕೆ ಹೆಚ್ ರವರ ಅಧ್ಯಕ್ಷತೆಯಲ್ಲಿ ಕಲ್ಲುಗುಂಡಿ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು. ಎಸ್ ವೈ ಎಸ್ ಕಲ್ಲುಗುಂಡಿ ಪ್ರಧಾನ ಕಾರ್ಯದರ್ಶಿ ಫೈಝಲ್ ಝುಹ್ರಿ ದುಆ ನೆರವೇರಿಸಿ, ಉದ್ಘಾಟಿಸಿದರು. ಸೆಕ್ಟರ್ ಸಮಿತಿಯಿಂದ ವೀಕ್ಷಕರಾಗಿ ಸಾದಿಕ್ ಪಿ ಜಿ, ಅಝೀಝ್ ಮಾಸ್ಟರ್ ಏಣಾವರ ಹಾಗೂ ಬಶೀರ್ ಕಲ್ಲುಮುಟ್ಲು ಆಗಮಿಸಿದರು. ಯುನಿಟ್ ಪ್ರಧಾನ ರುನೈಝ್ ಕೊಯನಾಡು ಸ್ವಾಗತಿಸಿ, ವರದಿ ವಾಚಿಸಿದರು. ಜವಾದ್ ಲೆಕ್ಕಪತ್ರ ಮಂಡಿಸಿದರು.
ನೂತನ ಸಮಿತಿ ಅಧ್ಯಕ್ಷರಾಗಿ ಆಶಿಕ್ ಕೆ ಹೆಚ್, ಉಪಾಧ್ಯಕ್ಷರಾಗಿ ಜವಾದ್ ಕಲ್ಲುಗುಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಜಾಸಿಂ ಕೊಯನಾಡು, ಕೋಶಾಧಿಕಾರಿಯಾಗಿ ಹಸೈನ್ ಕಲ್ಲುಗುಂಡಿ, ಕಾರ್ಯದರ್ಶಿಗಳಾಗಿ ಸವಾದ್(ದಅವಾ), ರುನೈಝ್(ಜಿ.ಡಿ), ನೌಶಾದ್ ಹಿಮಮಿ(ಕ್ಯೂ.ಡಿ), ಅರ್ಫಾಝ್ ಕೊಯನಾಡು(ಕ್ಯಾಂಪಸ್), ಜಾಬಿರ್ ಕೊಯನಾಡು(ರೈನ್ಬೋ) ಹಾಗೂ ಸಮಿತಿ ಸದಸ್ಯರಾಗಿ ಅಲಿ, ಸಾದಿಕ್, ಸೆಲೀಕ್,ಶಹೀದ್, ಕಾಶಿಫ್ ಆಯ್ಕೆಯಾದರು.