ಜನ್ನತುಲ್ ಉಲೂಮ್ ಮಸ್ಟಿದ್ & ಮದರಸ ಜಯನಗರ ಸುಳ್ಯ ಇದರ ವತಿಯಿಂದ ಇಂದು 31 ರಂದು 8ನೇ  ವಾರ್ಷಿಕ ಅಜ್ಮೀರ್ ಮೌಲೂದ್ ಹಾಗೂ ದುವಾ ಮಜ್ಜಿಸ್ ಅಧ್ಯಾತ್ಮಿಕ ಕಾರ್ಯಕ್ರಮ ಇಂದು ಸಂಜೆ 4.30 ಕ್ಕೆ ಜರುಗಲಿದೆ. 

ಅಜೀ‌ರ್ ಮೌಲೂದ್ ಪಾರಾಯಣ ದುವಾ ಮಜ್ಜಿಸ್ ನೇತೃತ್ವ: ಅಸ್ಸಯ್ಯದ್ ಝನುಲ್ ಆಬಿದೀನ್ ತಂಜಳ್ ಜಯನಗರ ವಹಿಸಲ್ಲಿದ್ದು ಅಬ್ದುಲ್ ನಾಸಿರ್ ಸಖಾಫಿ, ಹಂಝ ಸಖಾಫಿ, ಯೂಸುಫ್ ನಿಝಾಮಿ, ಅಬಕ್ಕರ್ ಸಿದ್ದೀಖ್ ಸಅದಿ ಅಲ್ ಹಾದಿ, ಅಬ್ದುಲ್ ರಶೀದ್ ಝನಿ, ಮೂಸ ಮುಸ್ಲಿಯಾರ್ ಉಪಸ್ಥಿತಿಇರಲಿದ್ದಾರೆ ನಂತರ ರಾತ್ರಿ ಸಮಯ. 7 ಕ್ಕೆ ಇಸ್ಲಾಮಿನ ಚರಿತ್ರೆ ಸಾರುವ  ಇಸ್ಲಾಮಿಕ್  ಕಥಾ ಪ್ರಸಂಗ  ಕಾರ್ಯಕ್ರಮ ನಡೆಯಲಿದೆ. ಇಸ್ಲಾಮಿಕ್ ಕಥಾ ಅವತರಣಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಸಂಚಲನ ಸೃಷ್ಟಿಸಿದ ಝುಬೈರ್ ಮಾಸ್ಟರ್ ತೋಟಿಕ್ಕಲ್ ಮತ್ತು ಸಂಘಡಿಗರಿಂದ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಲಿದೆ  ನೆರದ ಜನರನ್ನು ಮತ್ತು ಆಗಮಿಸಿದ ಅತಿಥಿ ಗಳನ್ನು .ಶಫೀಕ್ ಹಿಮಾಮಿ ಸಖಾಫಿ ಕಾರ್ಯಕ್ರಮ ಕ್ಕೆ ಸ್ವಾಗತಿಸಲಿದ್ದಾರೆ  ಕಾರ್ಯಕ್ರಮವನ್ನು ಹಾಫಿಲ್ ಹಾಮಿದ್ ಇಮಾಮಿ  ಸಖಾಫಿ, ಇವರು ಉದ್ಘಾಟಿಸಲ್ಲಿದ್ದಾರೆ. ಜಿ.ಇಬ್ರಾಹಿಂ ಸೀ ಫುಡ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ಲಾ ಜಯನಗರ ಅಧ್ಯಕ್ಷರು ಜೆ ಯು ಎಂ ಎಂ ಸಮಿತಿ ಜಯನಗರ ಇವರು ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *