ಮುಂಬೈ (ನ.7): ಅದು ಅಂತಿಂತ ಗೆಲುವಲ್ಲ.. ಆಸ್ಟ್ರೇಲಿಯಾ ಕ್ರಿಕೆಟ್‌ನ ಸ್ಮರಣೀಯ ಗೆಲುವುಗಳಲ್ಲಿ ಒಂದು. ಇನ್ನೇನು ತಂಡ ಅಫ್ಘಾನಿಸ್ತಾನದ ವಿರುದ್ಧ ದೊಡ್ಡ ಅಂತರದ ಸೋಲು ಕಂಡೇಬಿಟ್ಟಿತು ಎನ್ನುವ ಹಂತದಲ್ಲಿ ಬಿರುಗಾಳಿಯಂತೆ ಅಪ್ಪಳಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಏಕಾಂಗಿಯಾಗಿ ಹೋರಾಟ ನಡೆಸಿ ಆಸ್ಟ್ರೇಲಿಯಾ ತಂಡದ 3 ವಿಕೆಟ್‌ ಗೆಲುವಿಗೆ ಕಾರಣರಾದರು. ಕೊನೆಯ ಕ್ಷಣಗಳಲ್ಲಿ ನೋವಿನಿಂದ ನರಳುತ್ತಿದ್ದರೂ, ಒಂಚೂರು ಫುಟ್‌ವರ್ಕ್‌ ಬಳಸದೇ ಸಿಕ್ಸರ್‌, ಬೌಂಡರಿಗಳ ಮಳೆಗೆರೆದ ಮ್ಯಾಕ್ಸ್‌ವೆಲ್‌ ತಂಡ 6ನೇ ಗೆಲುವಿಗೆ ಕಾರಣರಾದರು.

ಅದರೊಂದಿಗೆ ಆಸೀಸ್‌ ತಂಡ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 5 ವಿಕೆಟ್‌ಗೆ 291 ರನ್‌ ಪೇರಿಸಿತು.ಪ್ರತಿಯಾಗಿ ಆಸ್ಟ್ರೇಲಿಯಾ ತಂಡ ಒಂದು ಹಂತದಲ್ಲಿ 91 ರನ್‌ಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ಆಸೀಸ್‌ 46.5 ಓವರ್‌ಗಳಲ್ಲಿ 7 ವಿಕೆಟ್‌ಗೆ 193 ರನ್ ಬಾರಿಸಿ ಗೆಲುವು ಕಂಡಿತು. ವೇಳೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಡಿದ ಸಾಹಸಿಕ ಇನ್ನಿಂಗ್ಸ್‌ ಆಸೀಸ್‌ನ ಮಹಾನ್‌ ಗೆಲುವಿಗೆ ಕಾರಣವಾಯಿತು. 128 ಎಸೆತ ಎದುರಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ 10 ಸಿಕ್ಸರ್‌, 21 ಬೌಂಡರಿಗಳೊಂದಿಗೆ 201 ರನ್‌ ಬಾರಿಸಿ ಅಜೇಯರಾಗುಳಿದರು. ಬಹುಶಃ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಡಿದ ಈ ಇನ್ನಿಂಗ್ಸ್‌ ಸದ್ಯದ ದಿನಗಳಲ್ಲಿ ಸಲೀಸಾಗಿ ಮರೆತುಹೋಗುವಂತ ಆಟ ಖಂಡಿತಾ ಅಲ್ಲ. ಅವರು ದ್ವಿಶತಕ ಬಾರಿಸಿದ್ದಕ್ಕಿಂತ ಹೆಚ್ಚಾಗಿ, ತಂಡದ ಅತ್ಯಂತ ಸಂಕಷ್ಟದ ಸಮಯದಲ್ಲಿ ಅವರು ಏಕಾಂಗಿಯಾಗಿ ಆಡಿದ ರೀತಿ ವರ್ಷಗಳ ಕಾಲ ಆಸೀಸ್‌ ನೆನಪಿಸಿಕೊಳ್ಳುತ್ತದೆ. ಈ ಇನ್ನಿಂಗ್ಸ್‌ನೊಂದಿಗೆ ಆಸ್ಟ್ರೇಲಿಯಾದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರುವುದು ನಿಶ್ಚಿತ. ಇಂಥ ಅಸಾಧಾರಣ ಗೆಲುವಿನೊಂದಿಗೆ ಆಸೀಸ್‌ ಕೂಡ ವಿಶ್ವಕಪ್‌ನ ಸೆಮಿಫೈನಲ್‌ ಟಿಕೆಟ್‌ ಗಿಟ್ಟಿಸಿಕೊಂಡಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ