Advertisement

ಮಡಿಕೇರಿ ಜು.6 : ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ನಿರ್ಮಿಸಲಾಗಿರುವ ಬೃಹತ್ ತಡೆಗೋಡೆಯ ಕಾಂಕ್ರೀಟ್ ಸ್ಲ್ಯಾಬ್‍ಗಳು ಕುಸಿದು ಬೀಳುವ ಸಾಧ್ಯತೆ ಇಲ್ಲ ಜನರು ಆತಂಕ ಪಡುವ ಆಗತ್ಯ ಇಲ್ಲ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯ ನಿವಾಘಹಕ ಎಂಜಿನಿಯರ್ ಸ್ಪಷ್ಟಪಡಿಸಿದ್ದಾರೆ.

ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಜಿಲ್ಲಾಡಳಿತಕ್ಕೆ ನಿರ್ಮಿಸಲಾದ ಬೃಹತ್ ತಡೆಗೋಡೆಯ ಕಾಂಕ್ರೀಟ್ ಸ್ಲ್ಯಾಬ್‍ಗಳು ಎರಡು ಇಂಚಿನಷ್ಟು ಹೊರ ಬಂದಿದ್ದು, ಅವು ಕಳಚಿ ಬೀಳುವ ಸ್ಥಿತಿಯಲ್ಲಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸ್ಪಷ್ಟನೆ ನೀಡಿರುವ ಲೋಕೋಪಯೋಗಿ ಇಲಾಖೆಯ ಕಾರ್ಯನಿವಾಘಹಕ ಎಂಜಿನಿಯರ್, ಧಾರಾಕಾರವಾಗಿ ಬೀಳುತ್ತಿರುವ ಮಳೆಯಿಂದ ಕಾಂಕ್ರೀಟ್ ಸ್ಲ್ಯಾಬ್‍ನ ಒಳಭಾಗಕ್ಕೆ ನೀರು ಇಳಿದಿದೆ. ಆದರೆ ಉಕ್ಕಿನ ಬೆಲ್ಟ್‌ನ್ನು ಅಳಡಿಸಿರುವುದರಿಂದ ಕುಸಿದು ಬೀಳುವ ಸಾಧ್ಯತೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ