ಕಡಬ: ಕಳಾರ ನಿವಾಸಿಯಾದ 33 ವರ್ಷ ವಯಸ್ಸಿನ ಮುಸ್ತಫಾ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.29ರಂದು ನಡೆದಿದೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಇಂದು ಬೆಳಿಗ್ಗೆ ಮುಸ್ತಫಾ ಅವರನ್ನು ಹುಡುಕಾಡಿದ್ದಾಗ ಹಳೆ ಮನೆಯೊಂದರಲ್ಲಿ ಮೊಬೈಲ್ ರಿಂಗ್ ಆಗುತ್ತಿದ್ದು ಬಳಿಕ ಸ್ಥಳೀಯರು ಗಾಜು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಇತ್ತೀಚೆಗೆ ಕಡಬದಲ್ಲಿ ಅಝರ್ ಎನ್ನುವ ಯುವಕ ನೇಣಿಗೆ ಶರಣಾಗಿದ್ದು ವಾರಗಳ ಬಳಿಕ ಮತ್ತೊಬ್ಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.