ಭಾರೀ ಮಳೆಗೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಶಿರಾಡಿ ಘಾಟ್ ಮತ್ತೆ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಶಿರಾಡಿಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿದೆ.
ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿದೆ. ಗುಡ್ಡ ಕುಸಿತದ ರಭಸಕ್ಕೆ ಬೃಹತ್ ಗಾತ್ರದ ಕಂಟೇನರ್ ಒಂದು ಪಲ್ಟಿಯಾಗಿದೆ. ಅಲ್ಲದೇ ಇತರೆ ವಾಹನಗಳು ಕೂಡ ಸಿಲುಕಿಕೊಂಡಿವೆ. ಪಲ್ಟಿಯಾದ ಕಂಟೇನರ್ ಜೊತೆಗೆ ಚಾಲಕ ಕೂಡ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಇದೀಗ ಲಾರಿಯೊಂದು ಪಲ್ಟಿಯಾದ ಘಟನೆ ನಡೆದಿದೆ. ತಡರಾತ್ರಿ ವರೆಗೂ ಸಕಲೇಶಪುರದಲ್ಲಿ ಕಾದು ರಸ್ತೆ, ಸಂಚಾರಕ್ಕೆ ಸುಗಮವಾದ ಸಮಯ ಹಾಸನದಿಂದ ಮಂಗಳೂರಿಗೆ ತರಕಾರಿ ಸಾಗಿಸುತ್ತಿದ್ದ ಲಾರಿ ಮಾರಣಹಳ್ಳಿ ಎಂಬಲ್ಲಿ ಪಲ್ಟಿ ಹೊಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮೈ ಜುಮ್ ಅನಿಸುತ್ತಿದೆ.