ಕಡಬ: ಹಠಾತ್ ಅನಾರೋಗ್ಯಕ್ಕೀಡಾದ ಕಾಲೇಜು ವಿದ್ಯಾರ್ಥಿಯೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಕಡಬ ತಾಲೂಕು ಕೊಯಿಲ ಗ್ರಾಮದ ಗಂಡಿಬಾಗಿಲು ಮೂಲದ ಮುಹಮ್ಮದ್ ಸಿರಾಜುದ್ದೀನ್ (17) ಮೃತ ವಿದ್ಯಾರ್ಥಿ.
ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಈತ ಕಾಲೇಜಿಗೆಂದು ಬೆಳಿಗ್ಗೆ ತನ್ನ ಗೆಳೆಯರೊಂದಿಗೆ ಹೊರಟು ಬಂದಿದ್ದ ಎಂದು ತಿಳಿದು ಬಂದಿದೆ .
ಕಾಲೇಜಿನ ದಾರಿ ಮಧ್ಯೆ ಬಿ.ಪಿ. ಲೋ ಸಮಸ್ಯೆಯಿಂದ ಈತ ತಲೆ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದ್ದು ಜೊತೆಗಿದ್ದ ಸ್ನೇಹಿತರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಕಾಲೇಜಿಗೆ ತಂದು ಅಂತಿಮ ದರ್ಶನಕ್ಕಿಡಲಾಗಿತ್ತು ಎಂದು ವರದಿ ಬಂದಿದೆ.