ಬಂಟ್ವಾಳ: ಎಸ್ಸೆಸೆಲ್ಸಿ ವಿದ್ಯಾರ್ಥಿ ಒಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗಸ್ಟ್ 7 ರಂದು ಬುಧವಾರ ರಾತ್ರಿ ವೇಳೆ ಬೆಂಜನಪದವು ಬಳಿ ನಡೆದಿದೆ. ಇಲ್ಲಿನ ಕರಾವಳಿ ಸೈಟ್ ನಿವಾಸಿಯಾಗಿರುವ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ತಿಳಿದು ಬಂದಿದೆ. ಬಡಕಬೈಲಿನ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯ ವ್ಯಾಸಂಗ ಮಾಡುತ್ತಿದ್ದು, ಈತ ಕಲಿಕೆ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದನ್ನು ಮನೆಯವರು ಅನುಮಾನಿಸಿದ್ದಾರೆ. ಬುಧವಾರ ರಾತ್ರಿ ಸುಮಾರು 7.30 ಗಂಟೆಗೆ ಸ್ನಾನ ಮಾಡಲೆಂದು ಬಾತ್ ರೂ ಗೆ ತೆರಳಿದ ಮಗ 8 ಗಂಟೆಯಾದರೂ ವಾಪಸ್ ಬಾರದೇ ಇರುವುದನ್ನು ಕಂಡ ತಾಯಿ ಬಾಗಿಲು ಬಡಿದರೂ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಬಾಗಿಲು ಮುರಿದು ಒಳಗೆ ನುಗ್ಗಿದಾಗ ಈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.