Advertisement
ಸಂಪಾಜೆ : ದಬ್ಬಡ್ಕ ವಲಯದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ ಮಾಂಸ ಮಾಡುವ ಸಂದರ್ಭದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿಗಳಾದ ಎ.ಟಿ.ಪೂವಯ್ಯ ಹಾಗೂ ಸಂಪಾಜೆ ವಲಯ ಅರಣ್ಯ ಅಧಿಕಾರಿ ಮಧುಸೂದನ್ ಎಂ.ಕೆ ರವರ ನೇತೃತ್ವದಲ್ಲಿ ಶಾಖೆಯ ಉಪ ಅರಣ್ಯ ಅಧಿಕಾರಿಗಳಾದ ನಿಸಾರ್ ಅಹಮದ್, ಅರಣ್ಯ ರಕ್ಷಕರಾದ ಕಾರ್ತಿಕ್, ಅರಣ್ಯ ವೀಕ್ಷಕರಾದ ಕೂಸಪ್ಪ ಮತ್ತು ಮನೋಜ್ ಕುಮಾರ್ ಅವರ ತಂಡವು ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ದಬ್ಬಡ್ಕ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ ಮತ್ತು ಪುರುಷೋತ್ತಮ ಕೆ.ಎಸ್ ಆಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಅಂದಾಜು ನೂರು ಕೆಜಿ ಕಡವೆ ಮಾಂಸ, ಬೇಟೆಯಾಡಲು ಉಪಯೋಗಿಸಿದ ಕತ್ತಿ, ಮಚ್ಚು ,ಟರ್ಪಲ್ ಹಗ್ಗ ಬಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement