ಪುತ್ತೂರು ಅಗಸ್ಟ್ 12: ಶಾಲೆಯಲ್ಲಿ ಇದ್ದ ಓರ್ವ ಖಾಯಂ ಶಿಕ್ಷಕಿಯನ್ನು ವರ್ಗಾವಣೆ ಮಾಡಿದ ಶಿಕ್ಷಣ ಇಲಾಖೆ ಕ್ರಮ ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಸವಣೂರಿನ ಅಮೈ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ಓರ್ವ ಖಾಯಂ ಶಿಕ್ಷಕಿ ಇದ್ದು, ಅವರನ್ನು ನಿಯಮಬಾಹಿರವಾಗಿ ಅಂತರ್ಜಿಲ್ಲಾ ವರ್ಗಾವಣೆ ವರ್ಗಾವಣೆ ಮಾಡಲಾಗಿದೆ ಎಂದು ಪೋಷಕರ ಆರೋಪವಾಗಿದೆ. ಈಗಾಗಲೇ ಶಾಲೆಯಲ್ಲಿ ಶಿಕ್ಷಕರ ಕೊರತೆ ಎಂದು ಆರೋಪಿಸಿ ಪೋಷಕರ ಪ್ರತಿಭಟನೆ ನಡೆಸಿದರು. ಮಕ್ಕಳನ್ನು ಶಾಲೆಗೆ ಕಳುಹಿಸದೆ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.