ಅರಂತೋಡು ಜಮಾಅತ್ ವತಿಯಿಂದ ಉಮ್ರಾ ಯಾತ್ರಾರ್ಥಿ ಮನ್ಸೂರ್ ಪಾರೆಕ್ಕಲ್ ಗೆ ಬೀಳ್ಕೊಡುಗೆ

News


ಅರಂತೋಡು ಬದ್ರಿಯಾ ಜಮಾಅತ್ ಸಮಿತಿಯ ನಿರ್ದೇಶಕರಾದ ಮನ್ಸೂರ್ ಪಾರೆಕ್ಕಲ್ ರವರು ಪವಿತ್ರ ಮಕ್ಕಾಕ್ಕೆ ಉಮ್ರಾ ಯಾತ್ರೆ ತೆರಳಲಿರುವುದರಿಂದ ಅವರನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಮತ್ತು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ ವತಿಯಿಂದ ಸೆ.4 ರಂದು ಬೀಳ್ಕೊಡಲಾಯಿತು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ದುವಾವನ್ನು ಖತೀಬರಾದ ಬಹು| ಆಸಿಫ್ ಅಝ್ ಹರಿ ನೆರವೇರಿಸಿದರು. ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವದರ್ಜೆ ) ಟಿ.ಎಂ ಶಹೀದ್ ತೆಕ್ಕಿಲ್ ಮನ್ಸೂರ್ ರವರನ್ನು ಶಾಲು ಹೊದಿಸಿ, ಯಾತ್ರೆಯು ಸುಖಕರವಾಗಲಿ ಎಂದು ಶುಭ ಹಾರೈಸಿದರು.
ಸದರ್ ರವೂಫ್ ಅಝ್ ಹರಿ, ಅಬ್ದುಲ್ ರಹಿಮಾನ್ ಝುಹರಿ, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್ ಕಾರ್ಯದರ್ಶಿ ಕೆ.ಎಂ ಮೂಸಾನ್ ಕೋಶಾಧಿಕಾರಿ, ಕೆ.ಎಮ್ ಅಬೂಬಕ್ಕರ್ ಪಾರೆಕ್ಕಲ್ ನಿರ್ದೇಶಕರಾದ ಹಾಜಿ ಅಬ್ದುಲ್ ಖಾದರ್ ಪಠೇಲ್ ಎ.ಹನೀಫ್ ಮೊಯಿದು ಕುಕ್ಕುಂಬಳ, ಸಂಶುದ್ಧೀನ್ ಪೆಲ್ತಡ್ಕ, ಮುಜೀಬ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ ಕಾರ್ಯದರ್ಶಿ ಪಸೀಲು, ಉಪಾಧ್ಯಕ್ಷ ಹಾಜಿ ಅಝಾರುದ್ಧೀನ್, ಕೆ.ಎಮ್ ಜಾವೇದ್ ತೆಕ್ಕಿಲ್, ಎಸ್.ಕೆ ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್ ಎಸ್.ಇ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಂ ಮೂಸಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *