ನೆಹರು ಮೆಮೋರಿಯಲ್ ಕಾಲೇಜು: ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ವಾಣಿಜ್ಯ ಸಂಘದ ವತಿಯಿಂದ “ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ ಉದಯೋನ್ಮುಖ ಕೌಶಲ್ಯಗಳು ಹಾಗೂ ವೃತ್ತಿ ಅವಕಾಶಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಅಕ್ಟೋಬರ್ 9ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಕರ್ನಾಟಕ ಬ್ಯಾಂಕ್‌ ಬೆಂಗಳೂರಿನ ಎಚ್‌ಬಿಆರ್ ಲೇಔಟ್ ಶಾಖೆಯ ಹಿರಿಯ ವ್ಯವಸ್ಥಾಪಕರಾದ ಶ್ರೀ ಗುರುಪ್ರಸಾದ್ ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬ್ಯಾಂಕಿಂಗ್ ಮತ್ತು ಹಣಕಾಸು […]

Read More

ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜು: ಪಿಯುಸಿ ವಿದ್ಯಾರ್ಥಿನಿಯರಿಗೆ ರಫೀಕ್ ಮಾಸ್ಟರ್ ಅವರಿಂದ ಪ್ರೇರಣಾದಾಯಕ ಉಪನ್ಯಾಸ

ಮಂಗಳೂರು: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬರಕಾ ಇಂಟರ್‌‌ನ್ಯಾಷನಲ್ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯರಿಗಾಗಿ ಖ್ಯಾತ ಮಾರ್ಗದರ್ಶಕ ರಫೀಕ್ ಮಾಸ್ಟರ್ ಅವರಿಂದ “ನಿಮ್ಮೊಳಗಿನ ಶಕ್ತಿ – ಪ್ರೇರಣೆ ಮತ್ತು ಕಲಿಕೆಯ ಒಂದು ದಿನ” ಎಂಬ ವಿಷಯದ ಕುರಿತು ವಿಶೇಷ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಫೀಕ್ ಮಾಸ್ಟರ್ ಅವರು, ಜೀವನದಲ್ಲಿ ಉನ್ನತ ಯಶಸ್ಸು ಗಳಿಸಲು ಆತ್ಮವಿಶ್ವಾಸ, ಸ್ವಯಂ ನಂಬಿಕೆ, ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸ ಅತ್ಯಂತ ಅಗತ್ಯ ಎಂದು ಒತ್ತಿ ಹೇಳಿದರು. […]

Read More

ಕೆ.ವಿ.ಜಿ. ಪಾಲಿಟೆಕ್ನಿಕ್: ಎನ್‌ಎಸ್‌ಎಸ್ ದಿನಾಚರಣೆ ಅಂಗವಾಗಿ ಏಕದಿನ ಶ್ರಮದಾನ ಶಿಬಿರ

ಅಮರಪಡ್ನೂರು: ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಎನ್ನೆಸ್ಸೆಸ್ ಘಟಕದ ವತಿಯಿಂದ ಸ್ಥಳೀಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅಮರಪಡ್ನೂರು (ಅಜ್ಜನಗದ್ದೆ)ಯಲ್ಲಿ ಎನ್‌ಎಸ್‌ಎಸ್ ದಿನಾಚರಣೆಯ ಅಂಗವಾಗಿ ಏಕದಿನ ಶ್ರಮದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.ಶಿಬಿರವನ್ನು ಉದ್ಘಾಟಿಸಿ ಸ‌ಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಈಶ್ವರ ಕೇನಡ್ಕ ಅವರು, “ಶ್ರಮದಾನವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತದೆ. ಶಾಲಾ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೌಢಶಾಲಾ […]

Read More

ಎನ್ನೆಂಸಿ: ಯುವ ರೆಡ್‌ಕ್ರಾಸ್ ಚಟುವಟಿಕೆಗಳಿಗೆ ಚಾಲನೆ

ವಿದ್ಯಾರ್ಥಿ ಜೀವನದಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಿ- ಹೇಮನಾಥ ಕೆ ವಿ ರಸ್ತೆ ಸುರಕ್ಷತೆ, ಅಪರಾಧ ತಡೆ ಹಾಗೂ ಮಾದಕ ದ್ರವ್ಯಗಳ ದುರ್ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ ಯುವಜನತೆ ಎಚ್ಚರಿಕೆಯಿಂದ ಹೆಜ್ಜೆಯಿಡಿ: ಎಸ್ ಐ ಉದಯರವಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮಹಿರಿಯರು ಕಿರಿಯರಿಗೆ ಮಾದರಿಯಾಗಿರಿ.– ಚಂದ್ರಶೇಖರ ಪೇರಾಲು ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ 2026–27ನೇ ಸಾಲಿನ ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಸೆ. 26ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಕಾಡೆಮಿ ಆಫ್ […]

Read More

ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫೀ, ರೀಲ್ಸ್, ವಿಡಿಯೋ ಚಿತ್ರೀಕರಣಕ್ಕೆ ಸಂಪೂರ್ಣ ನಿಷೇಧ

ರಾಜ್ಯದಾದ್ಯಂತ ನಡೆಯುವ ಶೈಕ್ಷಣಿಕ ಪ್ರವಾಸಗಳ ವೇಳೆ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದು ಮತ್ತು ಯಾವುದೇ ರೀತಿಯ ವೀಡಿಯೊ ಚಿತ್ರೀಕರಣ ಮಾಡುವುದನ್ನು ಶಿಕ್ಷಣ ಇಲಾಖೆ ಕಟ್ಟುನಿಟ್ಟಾಗಿ ನಿಷೇಧಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫೀ, ವೀಡಿಯೊಗಳಿಂದ ಸಂಭವಿಸಬಹುದಾದ ದುರ್ಘಟನೆಗಳನ್ನು ತಡೆಯಲು ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ, ಕಾಲೇಜುಗಳು ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಮೊದಲು ಕಡ್ಡಾಯವಾಗಿ ಇಲಾಖೆಯಿಂದ ಪೂರ್ವ ಅನುಮತಿ ಪಡೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಈ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟ ಅರಿವು ಮೂಡಿಸುವುದು […]

Read More

ಎನ್ನೆಂಸಿಯಲ್ಲಿ ಯುವ ರೆಡ್ ಕ್ರಾಸ್‌ ಘಟಕದಿಂದ ಶಿಕ್ಷಕರ ದಿನಾಚರಣೆ; ಶಿಕ್ಷಕರು ಬದುಕಿನ ದಾರಿದೀಪ

ಸುಳ್ಯ: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಇತ್ತೀಚೆಗೆ ಕಾಲೇಜು ಷಷ್ಟ್ಯಬ್ದ ರಂಗಮಂದಿರದಲ್ಲಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರ ನಿಜವಾದ ಹೆಮ್ಮೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರ ಪರಿಶ್ರಮ, ತ್ಯಾಗ ಮತ್ತು ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸದಾ ಗೌರವದಿಂದ ಸ್ಮರಿಸಬೇಕು. ಶಿಕ್ಷಕರ ಮೇಲಿನ ಗೌರವವು ಒಂದು ದಿನಕ್ಕೆ ಸೀಮಿತವಾಗದೆ ಸದಾ ಮುಂದುವರಿಯಬೇಕು […]

Read More

ಅರಂತೋಡು ಪದವಿ ಪೂರ್ವ ಕಾಲೇಜಿಗೆ ಪಠೇಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೀಲಿಂಗ್ ಫ್ಯಾನ್ ಕೊಡುಗೆ

ಪಠೇಲ್ ಚಾರಿಟೇಬಲ್ ಟ್ರಸ್ಟ್ ಅರಂತೋಡು ಇದರ ವತಿಯಿಂದ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿಗೆ ನಾಲ್ಕು ಸೀಲಿಂಗ್ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಸೆ.11 ರಂದು ನಡೆದ ಸರಳ ಸಮಾರಂಭದಲ್ಲಿ ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಬದ್ರುದ್ಧೀನ್ ಪಠೇಲ್ ರವರು ಶಾಲಾ ಸಂಚಾಲಕ ಎ.ಸಿ. ವಸಂತ್ ರವರಿಗೆ ಪ್ಯಾನ್ ಗಳನ್ನು ಹಸ್ತಾಂತರಿಸಿದರು . ಈ ಸಂಧರ್ಭದಲ್ಲಿ ಪಠೇಲ್ ಟ್ರಸ್ಟ್ ನ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಠೇಲ್, ನಿರ್ದೇಶಕ ಸೈಫುದ್ದೀನ್ ಪಠೇಲ್ ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ […]

Read More

ಸುಳ್ಯದ ಜನತೆಗೆ ಶುಭ ಸುದ್ದಿ: ತಿಲಾವ ಪ್ರೀ ಸ್ಕೂಲ್ ಶುಭಾರಂಭ!

ವಾಟ್ಸಾಪ್ ಸ್ಟೇಟಸ್ ಹಾಕಿ ‘ಗೋಲ್ಡ್ ಕಾಯಿನ್’ ಹಾಗೂ ಭರ್ಜರಿ ಆಫರ್ ಗೆಲ್ಲುವ ಸುವರ್ಣಾವಕಾಶ! ಸುಳ್ಯ: ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಧಾರ್ಮಿಕ ಮತ್ತು ನೈತಿಕ ಸಂಸ್ಕಾರವನ್ನು ನೀಡುವುದು ಅತ್ಯಗತ್ಯವಾಗಿದ್ದು, ಸುಳ್ಯದ ಪೋಷಕರ ಈ ಬೇಡಿಕೆಯನ್ನು ಈಡೇರಿಸಲು 2 ರಿಂದ 5 ವರ್ಷದ ಪುಟಾಣಿ ಮಕ್ಕಳಿಗೆ ಆಧುನಿಕ ಹಾಗೂ ಇಸ್ಲಾಮಿಕ್ ಶಿಕ್ಷಣದ ಅತ್ಯುತ್ತಮ ಸಂಯೋಜನೆಯೊಂದಿಗೆ ಗಾಂಧಿನಗರದ ಜನತಾ ರೆಸಿಡೆನ್ಸಿಯಲ್ಲಿರುವ ಕೆ.ಎ. ನಾಲೆಡ್ಜ್ ಸೆಂಟರ್‌ನಲ್ಲಿ ‘ತಿಲಾವ ಪ್ರೀ ಸ್ಕೂಲ್’ (Tilavah Preschool) ಶುಭಾರಂಭಗೊಂಡಿದೆ. […]

Read More

ಸುಳ್ಯದ ಜನತೆಗೆ ಶುಭ ಸುದ್ದಿ: ತಿಲಾವ ಪ್ರೀ ಸ್ಕೂಲ್ ಶುಭಾರಂಭ! ವಾಟ್ಸಾಪ್ ಸ್ಟೇಟಸ್ ಹಾಕಿ ‘ಗೋಲ್ಡ್ ಕಾಯಿನ್’ ಹಾಗೂ ಭರ್ಜರಿ ಆಫರ್ ಗೆಲ್ಲುವ ಸುವರ್ಣಾವಕಾಶ!

ಸುಳ್ಯ: ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಧಾರ್ಮಿಕ ಮತ್ತು ನೈತಿಕ ಸಂಸ್ಕಾರವನ್ನು ನೀಡುವುದು ಅತ್ಯಗತ್ಯವಾಗಿದ್ದು, ಸುಳ್ಯದ ಪೋಷಕರ ಈ ಬೇಡಿಕೆಯನ್ನು ಈಡೇರಿಸಲು 2 ರಿಂದ 5 ವರ್ಷದ ಪುಟಾಣಿ ಮಕ್ಕಳಿಗೆ ಆಧುನಿಕ ಹಾಗೂ ಇಸ್ಲಾಮಿಕ್ ಶಿಕ್ಷಣದ ಅತ್ಯುತ್ತಮ ಸಂಯೋಜನೆಯೊಂದಿಗೆ ಗಾಂಧಿನಗರದ ಜನತಾ ರೆಸಿಡೆನ್ಸಿಯಲ್ಲಿರುವ ಕೆ.ಎ. ನಾಲೆಡ್ಜ್ ಸೆಂಟರ್‌ನಲ್ಲಿ ‘ತಿಲಾವ ಪ್ರೀ ಸ್ಕೂಲ್’ (Tilavah Preschool) ಶುಭಾರಂಭಗೊಂಡಿದೆ. “Nurturing Faith, Building Future” ಎಂಬ ಉದಾತ್ತ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು […]

Read More

ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ತಾಯಿಯ ನಂತರ ಮಗುವಿನ ಬದುಕನ್ನು ಹೆಚ್ಚು ಪ್ರಭಾವಿಸುವ ವ್ಯಕ್ತಿ ಎಂದರೆ ಅದು ಶಿಕ್ಷಕ: ಡಾ. ಮಮತಾ ಕೆ ಶಿಕ್ಷಕ ವೃತ್ತಿಯು ಅತ್ಯಂತ ಅಮೂಲ್ಯವಾದುದು. ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಕಾಣದಂತೆ ನಿಂತಿರುವ ಶಕ್ತಿ ಶಿಕ್ಷಕರದು. ತಾಯಿಯ ನಂತರ ಮಗುವಿನ ಬದುಕನ್ನು ಹೆಚ್ಚು ಪ್ರಭಾವಿಸುವ ವ್ಯಕ್ತಿ ಎಂದರೆ ಅದು ಶಿಕ್ಷಕ.ಶಿಕ್ಷಕರು ಕೇವಲ ಪಾಠವನ್ನು ಬೋಧಿಸುವವರಲ್ಲ; ಅವರು ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ, ಮೌಲ್ಯಗಳು ಮತ್ತು ಭವಿಷ್ಯವನ್ನು ರೂಪಿಸುವ ಮಾರ್ಗದರ್ಶಕರು ಎಂದು ಕಾಲೇಜಿನ ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ ಇವರು ಸೆಪ್ಟೆಂಬರ್ […]

Read More