ಮಂಗಳೂರು ವಿಶ್ವವಿದ್ಯಾಲಯ ಮಹಿಳಾ ಕಬಡ್ಡಿಯಲ್ಲಿ ಎನ್‌ಎಂಸಿ ದ್ವಿತೀಯ ಸ್ಥಾನ

ಕು. ವೀಕ್ಷಾಳಿಗೆ ಅತ್ಯುತ್ತಮ ಆಲ್‌ರೌಂಡ್ ಆಟಗಾರ್ತಿ ಪ್ರಶಸ್ತಿ ಸುಳ್ಯ: ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಮಹಿಳಾ ಕಬಡ್ಡಿ ತಂಡವು ಪ್ರಿ-ಚಾಂಪಿಯನ್‌ಶಿಪ್ ಹಂತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಧರ್ಮಸ್ಥಳದ ಎಸ್‌ಡಿಎಂ ಕಾಲೇಜು, ಉಜಿರೆ ಇಲ್ಲಿ ಸೆಪ್ಟೆಂಬರ್ 29ರಿಂದ 30ರವರೆಗೆ ನಡೆದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಎನ್‌ಎಂಸಿ ಮಹಿಳಾ ತಂಡವು ಉತ್ತಮ ಪ್ರದರ್ಶನ ನೀಡಿ ಪ್ರಿ-ಚಾಂಪಿಯನ್‌ಶಿಪ್ ಹಂತದ ಫೈನಲ್‌ಗೆ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು.ತಂಡದ ಆಟಗಾರ್ತಿ ಹಾಗೂ […]

Read More

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ: ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸುಳ್ಯದ ಜೋಡಿಗೆ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಜರುಗಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2026-27ರ ಪುರುಷರ ಡಬಲ್ಸ್ ವಿಭಾಗದಲ್ಲಿ ಅದಿತ್ಯ ವರ್ಮಾ ಮತ್ತು ಪ್ರಮೋದ್ ಜೋಡಿಯು ಪ್ರಥಮ ಸ್ಥಾನ ಗಳಿಸಿ ವಿಜೇತರಾಗಿದ್ದಾರೆ. ಸ್ಪರ್ಧೆಯಲ್ಲಿ ಅತ್ಯುತ್ತಮ ಹೋರಾಟವನ್ನು ಪ್ರದರ್ಶಿಸಿದ ಸುಳ್ಯದ ಚೇತನ್ ಪಿ.ಎನ್. ಮತ್ತು ಯಜ್ಞೇಶ್ ಕಾನತ್ತಿಲ ಜೋಡಿಯು ದ್ವಿತೀಯ ಸ್ಥಾನವನ್ನು (ರನರ್ಸ್ ಅಪ್) ಪಡೆದುಕೊಂಡು ಗಮನಾರ್ಹ ಸಾಧನೆ ಮಾಡಿದೆ. ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ವಿಜೇತ […]

Read More
img 20260723 095942

ಅರಂತೋಡು: ರಕ್ತಸಿಕ್ತವಾಗುತ್ತಿದೆ ಹೆದ್ದಾರಿ! ಸರಣಿ ಅಪಘಾತಗಳಿಗೆ ಬ್ರೇಕ್ ಹಾಕುವವರು ಯಾರು

ಸುಳ್ಯ: ಮಣಿ-ಮೈಸೂರು ಹೆದ್ದಾರಿಯ ಅರಂತೋಡು ಭಾಗವು ಇತ್ತೀಚೆಗೆ ‘ಮೃತ್ಯುಕೂಪ’ವಾಗಿ ಮಾರ್ಪಡುತ್ತಿದೆ. ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ಭೀಕರ ಸರಣಿ ರಸ್ತೆ ಅಪಘಾತಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೊಂದೆಡೆ ಅಮೂಲ್ಯ ಜೀವಗಳು ರಸ್ತೆಯಲ್ಲೇ ಪ್ರಾಣ ಕಳೆದುಕೊಳ್ಳುತ್ತಿವೆ. ಈ ರಕ್ತಪಾತಕ್ಕೆ ತಡೆಗೋಡೆ ಹಾಕಬೇಕಾದ ವ್ಯವಸ್ಥೆ ಮತ್ತು ಸಾರ್ವಜನಿಕರ ನಿರ್ಲಕ್ಷ್ಯವೇ ಈ ದುರಂತಗಳಿಗೆ ಪ್ರಮುಖ ಕಾರಣವಾಗಿದೆ. ಸಾವು-ನೋವುಗಳ ಸರಮಾಲೆಗೆ ಕಾರಣಗಳೇನು?  ನೇರ ರಸ್ತೆಯಲ್ಲಿ ಮಿತಿಮೀರಿದ ವೇಗ.? ಅರಂತೋಡು ಭಾಗದ ರಸ್ತೆ ನೇರವಾಗಿರುವುದರಿಂದ ವಾಹನ ಸವಾರರು ವಿಪರೀತ ವೇಗದಲ್ಲಿ ಚಲಿಸುತ್ತಿದ್ದಾರೆ. ವೇಗದ ಮಿತಿಯ ಅರಿವಿಲ್ಲದೆ […]

Read More