ಮಡಿಕೇರಿ-ಸುಳ್ಯ ಹೆದ್ದಾರಿಯಲ್ಲಿ ಸೇತುವೆಗೆ ಡಿಕ್ಕಿ ಹೊಡೆದ ಕಾರು: ಕೂದಲೆಳೆಯ ಅಂತರದಲ್ಲಿ ತಪ್ಪಿದ ದುರಂತ, ಪ್ರಯಾಣಿಕರು ಸುರಕ್ಷಿತ

ದೇವರಕೊಲ್ಲಿ: ಮಡಿಕೇರಿ-ಸುಳ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಹೋಂಡಾ ಎಲಿವೇಟ್ (Honda Elevate) ಕಾರೊಂದು ರಸ್ತೆ ಬದಿಯ ಸೇತುವೆಯ ತಡೆಗೋಡೆಗೆ ಬಲವಾಗಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರು ಕೆಳಕ್ಕೆ ಉರುಳದೆ ಕೂದಲೆಳೆಯ ಅಂತರದಲ್ಲಿ ನಿಂತಿದ್ದರಿಂದ ಸಂಭವಿಸಬಹುದಾಗಿದ್ದ ದುರಂತವೊಂದು ತಪ್ಪಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ತಕ್ಷಣವೇ ಸುರಕ್ಷತಾ ಏರ್‌ಬ್ಯಾಗ್‌ಗಳು ತೆರೆದುಕೊಂಡಿವೆ. ಪರಿಣಾಮವಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯ ಬದಿಯಲ್ಲೇ […]

Read More

ಭಾರತೀಯ ಐಟಿ ದಿಗ್ಗಜರಿಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಪ್ರಕ್ರಿಯೆಯಿಂದ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಅಮಾನತು!

ಭಾರತೀಯ ಐಟಿ ಕ್ಷೇತ್ರದ ಪ್ರಮುಖ ಕಂಪನಿಗಳಿಗೆ ಅಮೆರಿಕ ಸರ್ಕಾರ ಬಿಗ್ ಶಾಕ್ ನೀಡಿದ್ದು, ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ ಹಾಗೂ ಕಾಗ್ನಿಜೆಂಟ್ ಸೇರಿದಂತೆ 8 ಪ್ರಮುಖ ಟೆಕ್ ಸಂಸ್ಥೆಗಳನ್ನು ಶಾಶ್ವತ ಕಾರ್ಮಿಕ ಪ್ರಮಾಣೀಕರಣ (PERM) ಪ್ರಕ್ರಿಯೆಯಿಂದ ಅಮಾನತುಗೊಳಿಸಿದೆ. ಈ ಪಟ್ಟಿಯಲ್ಲಿ ಮೈಕ್ರೋಸಾಫ್ಟ್ ಮತ್ತು ಅಡೋಬ್ ಕಂಪನಿಗಳೂ ಸೇರಿವೆ. ಅಮೆರಿಕದಲ್ಲಿ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಪಡೆಯಲು ಈ ಪ್ರಕ್ರಿಯೆ ಅತ್ಯಂತ ನಿರ್ಣಾಯಕವಾಗಿದ್ದು, ನಿಯಮಗಳ ದುರ್ಬಳಕೆ ಹಾಗೂ ಸ್ಥಳೀಯ ಅಮೆರಿಕನ್ನರ ಉದ್ಯೋಗ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಈ ಕಠಿಣ […]

Read More

ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ನೇಮಕ

ಕರ್ನಾಟಕದ ನಾಡು ನುಡಿಗೆ ಸೇವೆ ಸಲ್ಲಿಸಿದ, ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಮತ್ತು ಸಂಘ ಸಂಸ್ಥೆ ಗಳಿಗೆ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಗೆ ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ, ಈ ವರ್ಷದ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸರ್ಕಾರ ಆಯ್ಕೆ ಸಮಿತಿ ಯನ್ನು ರಚಿಸಿದ್ದು ಕರ್ನಾಟಕ ಅರಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ […]

Read More

ಮೆಟಾ ಕಂಪನಿಗೆ ಸೇರಿದ ಭಾರತೀಯ ಮೂಲದ ಎಐ ತಜ್ಞ: ₹800 ಕೋಟಿ ಪ್ಯಾಕೇಜ್ ಪಡೆದ ತ್ರಪಿತ್ ಬನ್ಸಲ್!

​ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತೀವ್ರ ಪೈಪೋಟಿ ನಡೆಯುತ್ತಿರುವ ನಡುವೆ, ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ‘ಮೆಟಾ’ (Meta) ಸಂಸ್ಥೆಯು ಭಾರತೀಯ ಮೂಲದ ಪ್ರತಿಭಾನ್ವಿತ ಎಐ ಸಂಶೋಧಕ ತ್ರಪಿತ್ ಬನ್ಸಲ್ ಅವರನ್ನು ಬರೋಬ್ಬರಿ ₹800 ಕೋಟಿ (ಸುಮಾರು $100 ಮಿಲಿಯನ್) ಮೌಲ್ಯದ ಭಾರಿ ಮೊತ್ತದ ಪ್ಯಾಕೇಜ್ ನೀಡಿ ನೇಮಿಸಿಕೊಂಡಿದೆ ಎಂದು ವರದಿಯಾಗಿದೆ. ​ಯಾರಿದು ತ್ರಪಿತ್ ಬನ್ಸಲ್? ​₹800 ಕೋಟಿ ಪ್ಯಾಕೇಜ್‌ನ ಹಿನ್ನೆಲೆ: ಮೆಟಾ ಕಂಪನಿಯು ಓಪನ್‌ಎಐ, ಗೂಗಲ್ ಮುಂತಾದ ದೈತ್ಯ ಕಂಪನಿಗಳಿಗೆ ಪೈಪೋಟಿ ನೀಡಲು ತನ್ನದೇ […]

Read More

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಿಜೆಪಿಯ ಏಜೆಂಟ್

ರಾಹುಲ್ ಗಾಂಧಿ ಬಂಧನ ಖಂಡಿಸಿ ಟಿ.ಎಂ. ಶಾಹಿದ್ ತೆಕ್ಕಿಲ್ ಕಿಡಿ ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಡವಳಿಕೆ ಹಾಗೂ ಅಧಿಕಾರ ದುರ್ಬಳಕೆಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬದಲು ಬಿಜೆಪಿ […]

Read More

ವಿದಾಯ ಹೇಳಿದ ಕಾಲ್ಚೆಂಡಿನ ಮಾಂತ್ರಿಕ: ಅಭಿಮಾನಿಗಳ ಕಣ್ಣಂಚು ಒದ್ದೆ ಮಾಡಿದ ವಿದಾಯದ ಕ್ಷಣ

ಫುಟ್‌ಬಾಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ 🇦🇷 ತಮ್ಮ 21 ವರ್ಷಗಳ ಭವ್ಯ ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಬ್ಯೂನಸ್ ಐರಿಸ್‌ನ ಮಾನ್ಯುಮೆಂಟಲ್ ಕ್ರೀಡಾಂಗಣದಲ್ಲಿ ಸುಮಾರು 85,000 ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಬೆನಿನ್ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 3-0 ಗೋಲುಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೆಸ್ಸಿಗೆ ಭಾವನಾತ್ಮಕ ವಿದಾಯ ನೀಡಿತು. ವಿದಾಯದ ಪಂದ್ಯದ ಮುಖ್ಯಾಂಶಗಳು ಅಂತರರಾಷ್ಟ್ರೀಯ ವೃತ್ತಿಜೀವನದ ದಾಖಲೆಗಳು ವಿವರಅಂಕಿ-ಅಂಶ ಒಟ್ಟು ಪಂದ್ಯಗಳು208 ಗಳಿಸಿದ ಗೋಲುಗಳು126 ಅಸಿಸ್ಟ್‌ಗಳು70 […]

Read More

ಕಾಸರಗೋಡು: ಸಿಡಿಲು ಬಡಿದು ಯುವಕ ಮೃತ್ಯು

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಸಿಡಿಲು ಬಡಿತಕ್ಕೆ ಯುವಕಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.ಮೃತ ಯುವಕರನ್ನು ಕುಂಡಾರ್ ಮೈಲಾನ್‌ಕೋಟ್ ಹೌಸ್‌ನ ಮುಹಮ್ಮದ್ ನೌಫಲ್ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಪಾಂಡಿ ಬಳವಂತುಕ್ಕೆಯಲ್ಲಿರುವ ತಮ್ಮ ಪತ್ನಿಯ ಮನೆಗೆ ತೆರಳಿದಾಗ ಈ ಅಪಘಾತ ಸಂಭವಿಸಿದೆ. ತಕ್ಷಣ ಅವರನ್ನು ಮುಳ್ಳೇರಿಯ ಸಹಕಾರಿ ಮೆಡಿಕಲ್ ಸೆಂಟರ್‌ಗೆ ಕರೆದೊಯ್ಯಲಾಯಿತಾದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ.ಅವರು ತಿರುವನಂತಪುರಂನ ಜ್ಯೂಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅರಬಿ ಮತ್ತು ನಬೀಸಾ ದಂಪತಿಯ ಪುತ್ರರಾಗಿದ್ದ ಇವರಿಗೆ ಪತ್ನಿ ಸುಹ್ರಾ ಹಾಗೂ ಇಬ್ಬರು […]

Read More

ಮುಚ್ಚಿಲ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರ ಕಾರು ಅಪಘಾತ; ಅಪಾಯದಿಂದ ಪಾರು

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಕಾರು ಪಂಜ–ನಿಂತಿಕಲ್ಲು ರಸ್ತೆಯ ಮುಚ್ಚಿಲ ಬಳಿ ಅಪಘಾತಕ್ಕೀಡಾಗಿದೆ. ನಿಂತಿಕಲ್ಲು ಮಾರ್ಗವಾಗಿ ಬರುತ್ತಿದ್ದ ವೇಳೆ, ಮುಂದೆ ಚಲಿಸುತ್ತಿದ್ದ ಸ್ವಿಫ್ಟ್ ಕಾರಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾರೆ. ಪರಿಣಾಮವಾಗಿ ಹಿಂಬದಿಯಿಂದ ಬರುತ್ತಿದ್ದ ಶಾಸಕಿಯವರ ಇನ್ನೋವಾ ಕಾರು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶಾಸಕಿಯವರ ಇನ್ನೋವಾ ಕಾರಿನ ಮುಂಭಾಗ ಜಖಂಗೊಂಡಿದ್ದು, ಸ್ವಿಫ್ಟ್ ಕಾರಿನ ಹಿಂಬದಿಗೂ ಹಾನಿಯಾಗಿದೆ. ಘಟನೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಎರಡೂ ವಾಹನಗಳಲ್ಲಿದ್ದವರು […]

Read More

ಪೈಚಾರು ಶಾಂತಿನಗರ ಕ್ರಾಸ್ ಬಳಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರರಿಗೆ ಗಾಯ

ಸುಳ್ಯ: ಇಲ್ಲಿನ ಪೈಚಾರು ಸಮೀಪದ ಶಾಂತಿನಗರ ಕ್ರಾಸ್ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸವಾರರು ಗಾಯಗೊಂಡ ಘಟನೆ ನಡೆದಿದೆ. ಸುಳ್ಯದಿಂದ ಪೈಚಾರು ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಪೈಚಾರು ಕಡೆಯಿಂದ ಸುಳ್ಯ ನಗರದತ್ತ ಹೋಗುತ್ತಿದ್ದ ಇನ್ನೊಂದು ಬೈಕ್ ನಡುವೆ ಶಾಂತಿನಗರ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ರಸ್ತೆಗೆ ಉರುಳಿ ಬಿದ್ದಿದ್ದು, ವಾಹನಗಳು ಭಾಗಶಃ ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ

Read More

ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ ಆದರ್ಶ ಕ್ಯಾಂಪೇನ್

ಎಸ್.ಕೆ.ಎಸ್.ಬಿ.ವಿ, ಅರಂತೋಡು ಶಾಖೆ ಇದರ ಆಶ್ರಯದಲ್ಲಿ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಆದರ್ಶ ಕ್ಯಾಂಪೇನ್ ಕಾರ್ಯಕ್ರಮವು ಅ.4 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅರಂತೋಡು ಬದ್ರಿಯಾ ಜುಮಾಮಸೀದಿ ಖತೀಬರಾದ ಬಹು ಆಸಿಫ್ ಅಝ್ ಹರಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಅಜ್ಜಾವರ ಮುಹಿದ್ಧೀನ್ ಜುಮಾ ಮಸೀದಿ ಖತೀಬರಾದ ಬಹು ಹಸೈನಾರ್ ಫೈಝಿ ಮಾತನಾಡಿ ಸತ್ಯ ನೈತಿಕತೆ, ದಯೆ ಹಾಗೂ ಸನ್ಮಾರ್ಗದಹಾದಿಯಲ್ಲಿ ಮುನ್ನಡೆಯಬೇಕೆಂದರು ಜಮಾಅತ್ ಅಧ್ಯಕ್ಷ ಅಸ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದರು. ಸದರ್ ರವೂಫ್ […]

Read More