ಪೈಚಾರ್: ಅಲ್-ಅಮೀನ್ ಯೂತ್ ಸೆಂಟರ್ (ರಿ.) ಪೈಚಾರ್ ಇದರ ವತಿಯಿಂದ 20ನೇ ಸ್ಪಲಾತ್ ವಾರ್ಷಿಕ ಕಾರ್ಯಕ್ರಮವು ಬದ್ರಿಯಾ ನಗರ ಪೈಚಾರ್ನಲ್ಲಿ ಡಿಸೆಂಬರ್ 14 ಮತ್ತು 15, 2026 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಡಿಸೆಂಬರ್ 14 (ಸೋಮವಾರ):
ದುಆ: ಸುಳ್ಯದ ಸಯ್ಯಿದ್ ಕುಂಞಿಕೋಯ ತಂಜಲ್ ಸಅದಿ ಅವರು ದುಆ ನೆರವೇರಿಸಲಿದ್ದಾರೆ. ಕೇರಳ ಇಡುಕ್ಕಿಯ ಅಲ್ ಹಾಫಿಲ್ ಅನ್ವರ್ ಮನ್ನಾನಿ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಡಿಸೆಂಬರ್ 15 (ಮಂಗಳವಾರ): ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನು ಅವರು ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ. ರಫೀಕ್ ಸಅದಿ ದೇಲಂಪಾಡಿ ಅವರು ಮುಖ್ಯ ಪ್ರಭಾಷಣ ನೆರವೇರಿಸಲಿದ್ದಾರೆ. ಹಾಗೂ ಕಡಲುಂಡಿಯ ಬಹು. ಬದ್ರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹೀಂ ಖಲೀల్ ಅಲ್ ಬುಖಾರಿ ಅವರು ಸ್ಪಲಾತ್ ನೇತೃತ್ವ ಹಾಗೂ ದುಆವನ್ನು ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.
